ಶಿಕ್ಷಣ-ಮಕ್ಕಳ ಅಭಿವೃದ್ಧಿ ಇಲಾಖೆ ಕಾಳಜಿ ತೋರಲಿ

ಲಿಂಗಸುಗೂರಿನ ಹುಲಿಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಹನುಮಂತರಾಯ ತಳ್ಳಳ್ಳಿ ವಿದ್ಯಾರ್ಥಿಗಳಿಗೆ ಅಲ್ಬೆಂಡಜೋಲ್ ಮಾತ್ರೆ ನೀಡಿದರು.
ಲಿಂಗಸುಗೂರಿನ ಹುಲಿಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಹನುಮಂತರಾಯ ತಳ್ಳಳ್ಳಿ ವಿದ್ಯಾರ್ಥಿಗಳಿಗೆ ಅಲ್ಬೆಂಡಜೋಲ್ ಮಾತ್ರೆ ನೀಡಿದರು.
Published on

ಲಿಂಗಸುಗೂರು: ಜಂತು ಕ್ರಿಮಿ ಸೋಂಕಿನಿಂದ ಮಕ್ಕಳಲ್ಲಿ ರಕ್ತಹೀನತೆಯಾಗಿ ವಿದ್ಯಾಭ್ಯಾಸ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಹಿಂದುಳಿಯುತ್ತಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಹನುಮಂತರಾಯ ತಳ್ಳಳ್ಳಿ ಹೇಳಿದರು.

ಹುಲಿಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಲ್ಬೆಂಡಜೋಲ್ ಮಾತ್ರೆ ನೀಡಿ ಮಾತನಾಡಿದರು. ಬಯಲು ಶೌಚ, ತೆರೆದಿಟ್ಟ ಆಹಾರ ಸೇವನೆ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದರಿಂದ ಜಂತು ಕ್ರಿಮಿ ಸೋಂಕು ಉಂಟಾಗುತ್ತದೆ. ವರ್ಷದಲ್ಲಿ ಎರಡು ಬಾರಿ 1 ರಿಂದ 19 ವರ್ಷದೊಳಗಿನವರು ಕಡ್ಡಾಯವಾಗಿ ಜಂತುಹುಳು ನಿವಾರಣೆ ಮಾತ್ರೆ ಸೇವಿಸಬೇಕು. ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಬಗ್ಗೆ ಕಾಳಜಿ ವಹಿಸಬೇಕು. ತಾಲೂಕಿನಲ್ಲಿ 1.27 ಲಕ್ಷ ಮಕ್ಕಳಿಗೆ ಮಾತ್ರೆ ನುಂಗಿಸುವ ಗುರಿ ಹೊಂದಲಾಗಿದೆ ಎಂದರು.
ಡಾ.ಅಂಬಿಕಾ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಶಿ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ ಗೋಸ್ಲೆ, ಸದಸ್ಯ ರವಿಕುಮಾರ, ಶಿವಲಿಂಗಪ್ಪ, ರಾಚಪ್ಪ, ನೂರ್‌ಜಹಾ ಬೇಗಂ, ಶಿಕ್ಷಕ ಶಿವಯೋಗಿ, ಸವಿತಾ, ನಾಗರತ್ನ, ಆಶಾ ಕಾರ್ಯಕರ್ತೆ ರೇಣುಕಾ, ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net