ಮಾಗಿದ ಮುತ್ಸದ್ದಿ ಗ್ರಂಥ ಲೋಕಾರ್ಪಣೆ

ರಾಯಚೂರಿನ ಗಂಜ್ ಕಲ್ಯಾಣ ಮಂಟಪದಲ್ಲಿ ಬುಧವಾರ ಮಾಜಿ ಸಚಿವ ಎಂ.ಎಸ್. ಪಾಟೀಲ ಅವರ ಮಾಗಿದ ಮುತ್ಸದ್ದಿ ಗ್ರಂಥವನ್ನು ಮಾಜಿ ಸಭಾಪತಿ ಕೆ.ರಮೇಶ ಕುಮಾರ ಲೋಕಾರ್ಪಣೆ ಮಾಡಿದರು. ಬೂದಿಬಸವ ಶಿವಾಚಾರ್ಯ, ರಾಚೋಟಿ ಶಿವಾಚಾರ್ಯ, ಗುರುಬಸವ ಮಹಾಸ್ವಾಮಿ, ಸಿದ್ದಲಿಂಗಸ್ವಾಮಿ,ಮಾಜಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಡಾ.ಎಸ್.ಶಿವರಾಜ ಪಾಟೀಲ್, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ, ಸಂಸದ ಜಿ.ಕುಮಾರ ನಾಯಕ,ಮಾಜಿ ಸಚಿವರಾದ ಅಮರೆಗೌಡ, ಬಯ್ಯಪುರ,ಶಾಸಕ ಹಂಪಯ್ಯ ನಾಯಕ, ಮಾಜಿ ಸಂಸದ ಬಿ.ವಿ ನಾಯಕ, ಎನ್ ಶಂಕ್ರಪ್ಪ, ಬಿ.ವೆಂಕಟಸಿಂಗ್, ಚಂದ್ರಶೇಖರ ಮಿರ್ಜಾಪೂರು, ಎಂ.ವಿರೂಪಾಕ್ಷಿ, ಮಹ್ಮದ್  ಶಾಲಂ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಂ.ಎಸ್.ಪಾಟೀಲ್ ಅವರ ಸೇವೆ ಶ್ಲಾಘನೀಯ- ಕೆ.ರಮೇಶ
ರಾಯಚೂರು
ಮಾಜಿ ಸಚಿವ ಎಂ.ಎಸ್.ಪಾಟೀಲ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾರ್ವಜನಿಕ ಸೇವೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ರಾಜಕೀಯ ಜೀವನದಲ್ಲಿ ಏನನ್ನೂ ಅಪೇಕ್ಷಿಸದ ಅಪರೂಪದ ರಾಜಕಾರಣಿ ಸುಸಂಸ್ಕೃತ ನಾಯಕರು, ಹೃದಯವಂತಿಕೆ ವ್ಯಕ್ತಗಳ ಮಾತ್ರ ಪ್ರಜಾಪ್ರಭುತ್ವ ಉಳಿಸಲು ಸಾಧ್ಯವಾಗುತ್ತಿದೆಂದು ಮಾಜಿ ಸಭಾಪತಿ ಕೆ.ರಮೇಶ ಕುಮಾರ ಹೇಳಿದರು.

ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಬುಧವಾರ ಮಾಜಿ ಸಚಿವ ಎಂ.ಎಸ್. ಪಾಟೀಲ ಅವರ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ ಮಾಗಿದ ಮುತ್ಸದ್ದಿ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ನ್ಯಾಯ ಸಿಗಬೇಕು ಅದು ಸಾಧ್ಯವಾಗುತ್ತಿಲ್ಲ. ಆದರೆ ಎಂ.ಎಸ್. ಪಾಟೀಲ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಅವರ ಜೀವನಧಾರಿತ ಮಾಗಿದ ಮುತ್ಸದ್ದಿ ಗ್ರಂಥ ಲೋಕಾರ್ಪಣೆ ಮಾಡುವ ಮೂಲಕ ಮಾಜಿ ಶಾಸಕರು ಎ.ಪಾಪಾರೆಡ್ಡಿ ಅವರು ಅವರಿಗೆ ಹೃದಯಸ್ಪರ್ಶಿ ಗೌರವ ಸಲ್ಲಿಸಿರುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ವಿರೋಧಿಗಳಾಗಿದ್ದರು ಚುನಾವಣೆ ವಿರೋಧಿಗಳು ಹೊರತು ವೈಯಕ್ತಿಕ ವಿರೋಧಿಗಳಲ್ಲ ಎಂದರು.

ಮಾಜಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ದೇಶ ಹಾಗೂ ಜಗತ್ತಿನಲ್ಲಿ ಇಂತಹ ಕಾರ್ಯಕ್ರಮ ನಡೆದಿಲ್ಲ. ಇದು ಕೇವಲ ಪಾಪಾರೆಡ್ಡಿ ಅವರು ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪ್ರತಿಸ್ಪರ್ದಿ ಎಂ.ಎಸ್.ಪಾಟೀಲ್ ಅವರ ಜೀವನಧಾರಿತ ಮಾಗಿದ ಮುತ್ಸದ್ದಿ ಗ್ರಂಥ ಲೋಕಾರ್ಪಣೆ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಸಾಕ್ಷಿಯಾಗಲಿದೆ. ಅವರ ರಾಜಕೀಯ ಬದ್ಧತೆ, ಪ್ರಾಮಾಣಿಕತೆ ಮತ್ತು ಸಮರ್ಪಣೆ ಹಾಗೂ ಜನರ ಬಗ್ಗೆ ಅವರ ಕಾಳಜಿ ಹೆಚ್ಚು ಶ್ಲಾಘನೀಯ. ಯುವ ರಾಜಕಾರಣಿಗಳು ಅವರು ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಎಂದರು.

ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಬೂದಿಬಸವ ಶಿವಾಚಾರ್ಯ, ರಾಚೋಟಿ ಶಿವಾಚಾರ್ಯ, ಗುರುಬಸವ ಮಹಾಸ್ವಾಮಿ, ಸಿದ್ದಲಿಂಗಸ್ವಾಮಿ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ, ಸಂಸದ ಜಿ.ಕುಮಾರ ನಾಯಕ,ಮಾಜಿ ಸಚಿವರಾದ ಅಮರೆಗೌಡ, ಬಯ್ಯಪುರ,ಶಾಸಕ ಹಂಪಯ್ಯ ನಾಯಕ, ಮಾಜಿ ಸಂಸದ ಬಿ.ವಿ ನಾಯಕ, ಎನ್ ಶಂಕ್ರಪ್ಪ, ಬಿ.ವೆಂಕಟಸಿಂಗ್, ಚಂದ್ರಶೇಖರ ಮಿರ್ಜಾಪೂರು, ಎಂ.ವಿರೂಪಾಕ್ಷಿ, ಮಹ್ಮದ್ ಶಾಲಂ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net