ಬಳ್ಳಾರಿ ಸಂಘರ್ಷ, ಕರ್ನಾಟಕದ ಸಂಸ್ಕೃತಿ ಅಲ್ಲ

 ಸಂತೋಷ ಲಾಡ್
ಸಂತೋಷ ಲಾಡ್
Published on
ಲಿಂಗಸುಗೂರು: ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ನಡೆದ ಸಂಘರ್ಷ ಕರ್ನಾಟಕದ ಸಂಸ್ಕೃತಿ ಅಲ್ಲ. ಅಂಥ ಘಟನೆ ಆಗಬಾರದಿತ್ತು. ವೈಯಕ್ತಿಕವಾಗಿ ಖಂಡಿಸುತ್ತೇನೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. 
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಗಲಾಟೆಗೆ ಸಂಬಂಧಿಸಿ ಎಸ್ಪಿ ಪವನ್ ನಜ್ಜೂರ್ ಅಮಾನತು ಮಾಡಿರುವ ಸರ್ಕಾರದ ನಿಲುವಿನ ಹಿಂದೆ ಕಾರಣ ಇರುತ್ತದೆ. ಸುಮ್ಮನೆ ಕ್ರಮಕೈಗೊಳ್ಳಲ್ಲ. ಸಂಪೂರ್ಣ ತನಿಖೆಯಾದ ನಂತರ ಸತ್ಯಾಸತ್ಯತೆ ಹೊರಬರುತ್ತದೆ ಎಂದರು. 
ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರ ಉಪಕರ (ಸೆಸ್) 7500 ಕೋಟಿ ರೂ. ಇದೆ. ನಾನು ಸಚಿವನಾದ ಬಳಿಕ 13 ಲಕ್ಷ ಮಕ್ಕಳಿಗೆ ಶಿಷ್ಯವೇತನ ನೀಡಲಾಗಿದೆ. ಅಕ್ರಮ ಕಾರ್ಮಿಕ ಕಾರ್ಡ್ ರದ್ದುಪಡಿಸಿ 50 ಲಕ್ಷದಿಂದ 30 ಲಕ್ಷಕ್ಕೆ ತಂದಿದ್ದೇವೆ. ಹಂತ ಹಂತವಾಗಿ ಟೂಲ್ ಕಿಟ್‌ಗಳನ್ನು ಹಂಚಿಕೆ ಮಾಡುತ್ತಿದ್ದೇವೆ. 
ಹೊಸ 7 ಬಿಲ್‌ಗಳನ್ನು ಜಾರಿಗೆ ತರಲಾಗಿದೆ. ಲಿಂಗಸುಗೂರು ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರಿಗೆ ಸಮರ್ಪಕವಾಗಿ ಕಿಟ್ ಹಂಚುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net