ದಾಸೋಹ ಕಾರ್ಯ ಶ್ಲಾಘನೀಯ

ಸಿಂಧನೂರು ಪಿಡಬ್ಲ್ಯುಡಿ ಕ್ಯಾಂಪ್‌ನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಜೈ ಹಿಂದ್ ಉಚಿತ ಆಹಾರ ಕೇಂದ್ರದ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಅಧ್ಯಕ್ಷ ಹುಸೇನ್‌ಸಾಬ್ ಮಾತನಾಡಿದರು. ಶಾದಿಮಹಲ್‌ನ ಅಧ್ಯಕ್ಷ ಖಾಜಿ ಜಿಲಾನಿಸಾಬ್, ಪ್ರಮುಖರಾದ ಮೌಲಾನಾ ತಾಜಿಮುದ್ದೀನ್ ಸಾಬ್, ಬಸವರಾಜ ಬಾದರ್ಲಿ, ಸಿರಾಜ್, ಇಮ್ತಿಯಾಜ್ ಬೇಗ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹೇಳಿಕೆ
  • ದಾಸೋಹ
  • ಸೇವೆ
ಸಿಂಧನೂರು: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಎರಡು ವರ್ಷಗಳಿಂದ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಆಶ್ರಯದಲ್ಲಿ ಉಚಿತ ಆಹಾರ ವಿತರಿಸುತ್ತಿರುವ ಜೈಹಿಂದ್ ಉಚಿತ ಆಹಾರ ಕೇಂದ್ರದ ದಾಸೋಹ ಕಾರ್ಯ ಶ್ಲಾಘನಾರ್ಹ ಎಂದು ಜನನಿ ಆಸ್ಪತ್ರೆ ಮಕ್ಕಳ ತಜ್ಞ ಚನ್ನಬಸವ ಪಾಟೀಲ್ ಹೇಳಿದರು.
ನಗರದ ಪಿಡಬ್ಲ್ಯುಡಿಕ್ಯಾಂಪ್‌ನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಜೈ ಹಿಂದ್ ಉಚಿತ ಆಹಾರ ಕೇಂದ್ರದ ಸೇವಾ ಕಾರ್ಯಕ್ಕೆ ಎರಡು ವಷರ್ಗಳಾದ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿರಂತರ ಎರಡು ವಷರ್ಗಳ ಕಾಲ ದಾಸೋಹ ಸೇವೆ ಕೈಗೊಳ್ಳುವುದು ಸುಲಭದ ಮಾತಲ್ಲ ಎಂದರು.
ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಅಧ್ಯಕ್ಷ ಅಬುಲೈಸ್ ನೈಕ್ ಮಾತನಾಡಿ. ದಾಸೋಹ ಸೇವೆ ನಡೆಸಲು ಹಲವರ ಸಹಕಾರವಿದೆ. ಮುಂದಿನ ದಿನಗಳಲ್ಲಿ ಸೇವೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್‌ನ ಅಧ್ಯಕ್ಷ ಹುಸೇನ್‌ಸಾಬ, ಮಿಲಾಪ್ ಶಾದಿಮಹಲ್‌ನ ಅಧ್ಯಕ್ಷ ಖಾಜಿ ಜಿಲಾನಿಸಾಬ್, ಮುಖಂಡರಾದ ಮೌಲಾನಾ ತಾಜಿಮುದ್ದೀನ್ ಸಾಬ್, ಬಸವರಾಜ ಬಾದರ್ಲಿ, ಸಿರಾಜ್, ಇಮ್ತಿಯಾಜ್ ಬೇಗ್, ಡಾ.ವಾಸಿಂ, ಇಸ್ಮಾಯಿಲ್, ನಯೀಮ್, ಮನ್ಸೂರ್, ಸನಾವುಲ್ಲಾ, ಖಾಜಾ, ಉಮರ್ ಇತರರಿದ್ದರು. ತನ್ವೀರ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net