ತಿಂಥಣಿ ಶ್ರೀಗಳ ಸಾಧನೆ, ಕಾರ್ಯ ಶಾಶ್ವತ

ಸಿಂಧನೂರಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದಿಂದ ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ಧರಾಮಾನಂದ ಶ್ರೀಗಳಿಗೆ ಗುರುವಾರ ನುಡಿನಮನ ಸಲ್ಲಿಸಲಾಯಿತು.
ಸಿಂಧನೂರಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದಿಂದ ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ಧರಾಮಾನಂದ ಶ್ರೀಗಳಿಗೆ ಗುರುವಾರ ನುಡಿನಮನ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಿಂಧನೂರಿನಲ್ಲಿ ಮಾಜಿ ಸಂಸದ ಕೆ.ವಿರೂಪಕ್ಷಪ್ಪ ಹೇಳಿಕೆ
  • ಸಿದ್ಧರಾಮಾನಂದ ಸ್ವಾಮೀಜಿಗೆ ನುಡಿನಮನ
ಸಿಂಧನೂರು: ಹಾಲುಮತ ಸಮಾಜಕ್ಕೆ ಸಿದ್ಧರಾಮಾನಂದ ಶ್ರೀಗಳ ಕೊಡುಗೆ ಅಪಾರವಾಗಿದೆ. ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿ, ಸಮಾಜದ ಏಳಿಗೆಗೆ ಶ್ರಮಿಸಿದ್ದರು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು. 
ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದಿಂದ ಗುರುವಾರ ಏರ್ಪಡಿಸಿದ್ದ ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಪೀಠಾಧಿಪತಿ ಲಿಂ.ಸಿದ್ಧರಾಮಾನಂದ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಗಳು ಅಗಲಿದರೂ 20 ವರ್ಷದಲ್ಲಿ ಅವರು ಮಾಡಿದ ಸಾಧನೆ, ಕಾರ್ಯಗಳು ಶಾಶ್ವತವಾಗಿ ಉಳಿಯಲಿವೆ. ದಶಕಗಳ ಕಾಲ ಅಕ್ಷರ, ಅರಿವು ಮೂಡಿಸುವ ಜತೆಯಲ್ಲಿ ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯದಲ್ಲೂ ಇರುವ ಹಾಲುಮತ ಸಮಾಜದ ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಿದ್ದರು. 
ಶ್ರೀಗಳ ಅಗಲಿಕೆ ಬಳಿಕವೂ ಮಠವನ್ನು ಮುನ್ನಡೆಸುವ, ಮಠದ ಏಳಿಗೆಗೆ ಸಹಕರಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಬರೀ ಮಾತನಾಡದೆ, ಯಾರೇ ಪೀಠಾಧಿಪತಿಯಾದರೂ ಅವರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ತುರ್ವಿಹಾಳ ಅಮೋಘಸಿದ್ಧೇಶ್ವರ ಮಠದ ಚಿದಾನಂದಯ್ಯ ಗುರುವಿನ್ ಮಾತನಾಡಿ, ಸಿದ್ಧರಾಮಾನಂದ ಶ್ರೀಗಳ ಕೊನೆಯ ದಿನದವರೆಗೂ ಜೊತೆಯಲ್ಲಿಯೇ ಇದ್ದೆ. ಎರಡು ಗಂಟೆಗಳ ಕಾಲ ನನ್ನೊಂದಿಗೆ ಶ್ರೀಗಳು ಮಾತನಾಡಿದ್ದರು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು.
ತುರ್ವಿಹಾಳ ಅಮೋಘಸಿದ್ಧೇಶ್ವರ ಮಠದ ಮಾದಯ್ಯ ಗುರುವಿನ್, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಕೆ.ಭೀಮಣ್ಣ, ಮುಖಂಡರಾದ ಕೆ.ಕರಿಯಪ್ಪ, ನಿರುಪಾದೆಪ್ಪ ಗುಡಿಹಾಳ, ಅಮರೇಶಪ್ಪ ಮೈಲಾರ, ನಾಗವೇಣಿ ಪಾಟೀಲ್, ಬಸವರಾಜ ವಿ., ಬಸವರಾಜ ಡೊಣಮರಡಿ, ಡಿ.ಎಚ್.ಕಂಬಳಿ, ಶರಣಪ್ಪ ಗೋನಾಳ, ಬೀರಪ್ಪ ಶಂಭೋಜಿ, ಶಂಕರ ಗುರಿಕಾರ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net