ಶ್ರೀಗಳಿಂದ 14ನೇ ಚಾತುರ್ಮಾಸ್ಯ ದೀಕ್ಷೆ ಆರಂಭ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸೋಮವಾರ ಶ್ರೀಮಠದಲ್ಲಿ  14ನೇ ಚಾತುರ್ಮಾಸ್ಯ ದೀಕ್ಷೆಯನ್ನು ಆರಂಭಿಸಿ ಮೂಲ ರಾಮ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸೋಮವಾರ ಶ್ರೀಮಠದಲ್ಲಿ 14ನೇ ಚಾತುರ್ಮಾಸ್ಯ ದೀಕ್ಷೆಯನ್ನು ಆರಂಭಿಸಿ ಮೂಲ ರಾಮ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
Published on

ರಾಯಚೂರು

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸೋಮವಾರ ಶ್ರೀಮಠದಲ್ಲಿ 14ನೇ ಚಾತುರ್ಮಾಸ್ಯ ದೀಕ್ಷೆಯನ್ನು ಆರಂಭಿಸಿದರು.

ಶ್ರೀಗಳು ಸಾಂಪ್ರದಾಯಿಕ ಚಾತುರ್ಮಾಸ್ಯ ದೀಕ್ಷೆಯ ವಿಧಿ-ವಿಧಾನಗಳನ್ನು ನೆರವೇರಿಸಿ, ರಾಯರ ಮೂಲ ಬೃಂದಾವನ , ಶ್ರೀ ವಾದೀಂದ್ರ ತೀರ್ಥರ ಬೃಂದಾವನ ಸೇರಿ ಶ್ರೀಮಠದಲ್ಲಿನ ಎಲ್ಲಾ ಬೃಂದಾವನಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅನುಗ್ರಹ ಸಂದೇಶದಲ್ಲಿ ಚಾತುರ್ಮಾಸ್ಯದ ಮಹತ್ವ ಹಾಗೂ ಆಧ್ಯಾತ್ಮಿಕ ಆಚರಣೆಗಳ ಕುರಿತು ಸಂದೇಶ ನೀಡಿದರು.

ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಗಳು ಭಕ್ತರಲ್ಲಿ ಧಾರ್ಮಿಕ ಭಾವನೆ, ಆಧ್ಯಾತ್ಮಿಕ ಚಿಂತನೆ ಹಾಗೂ ಸೇವಾ ಮನೋಭಾವವನ್ನು ಹೆಚ್ಚಿಸುವುದರ ಜೊತೆಗೆ ಮಂತ್ರಾಲಯದ ಭಕ್ತಿಮಯ ವಾತಾವರಣವನ್ನು ಮತ್ತಷ್ಟು ಶ್ರೀ ಮಂತಗೊಳಿಸಲಿವೆ.

ಚಾತುರ್ಮಾಸ್ಯ ದೀಕ್ಷೆಯ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಆಗಮಿಸಿದ ಭಕ್ತರು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net