ಬೆಳಗ್ಗೆಯ ಪರೀಕ್ಷೆಗೆ ಒಟ್ಟು 17 ಪರೀಕ್ಷೆ ಕೇಂದ್ರದಲ್ಲಿ 3883 ಜನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 3649 ಜನ ಹಾಜಾರಾದರೆ,234 ಜನ ಗೈರಾಗಿದ್ದಾರೆ. ಅದರಂತೆ ಮಧ್ಯಾಹ್ನದ ಪರೀಕ್ಷೆಗೆ 47 ಕೇಂದ್ರದಲ್ಲಿ 11,013 ಜನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 10484 ಜನ ಹಾಜಾರಾದರೆ 529 ಜನ ಗೈರಾಗಿದ್ದಾರೆಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಡಿ.ಬಡಿಗೇರ ತಿಳಿಸಿದ್ದಾರೆ.