ಪಟ್ಟಣದ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಉಚಿತ ಟೆನಿಸ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಒತ್ತಡ ನಿವಾರಣೆ, ಮಿದುಳಿನ ಶಕ್ತಿ ಹೆಚ್ಚಿಸಲು ಹಾಗೂ ದೈಹಿಕವಾಗಿ ಬಲಗೊಳ್ಳಲು ಟೆನಿಸ್ ಆಟ ಸಹಾಯಕವಾಗುತ್ತದೆ ಎಂದರು. ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಮಾತನಾಡಿ, ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಟೆನಿಸ್ ಆಡಲು ಪ್ರೋತ್ಸಾಹಿಸಬೇಕು ಎಂದರು. ಡಾ.ಶರಣಗೌಡ ಪಾಟೀಲ್, ಡಾ.ವಿಜಯಕುಮಾರ, ಡಾ.ವೆಂಕಟೇಶ, ಗುರುರಾಜ ಮುತಾಲಿಕ, ಮನೋಹರ ರೆಡ್ಡಿ, ಪ್ರಮೋದ ಕುಲಕರ್ಣಿ, ಸುಧೀರ, ಸುಮಂತ, ತರಬೇತುದಾರ ಸಿಂಬು ಇದ್ದರು.