ತಹಸಿಲ್-ಸರ್ವೇ ಇಲಾಖೆಯ ಕಚೇರಿ ಪಟ್ಟಣದಿಂದ 2 ಕಿಮೀ ದೂರದಲ್ಲಿದೆ. ಇದರಿಂದ ರೈತರು, ವೃದ್ಧರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗಿದೆ. ವಕೀಲರ ಸಂಘ, ವಿವಿಧ ಕನ್ನಡಪರ ಸಂಘಟನೆಗಳು ಶಾಸಕ ಮಾನಪ್ಪ ವಜ್ಜಲಗೆ ಮನವಿ ಮಾಡಿಕೊಂಡಿದ್ದರು. ಬೆಳಗಾವಿ ಅಧಿವೇಶನದಲ್ಲಿ ಶಾಸಕ ವಜ್ಜಲ್ ಪ್ರಸ್ತಾಪಿಸಿ, ಹಳೇ ಕೋರ್ಟ್ ಕಟ್ಟಡಕ್ಕೆ ಸ್ಥಳಾಂತರಿಸಲು ಮನವಿ ಕೋರಿದ್ದರು. ಅಲ್ಲದೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಪತ್ರ ಬರೆದಿದ್ದರು.