ಚಿಣ್ಣರಿಗೆ ಅಕ್ಷರಾಭ್ಯಾಸ ಮಾಡಿಸಿದ ಶಿಕ್ಷಕರು

ದೇವದುರ್ಗದ ಪಟೇಲ್ ಓಣಿಯ ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿ ಸೋಮವಾರ ಅಕ್ಷತೆಪಾತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಅಕ್ಷರಾಭ್ಯಾಸ ಮಾಡಿಸಿದರು. ಶಿಕ್ಷಕರಾದ ಪವಿತ್ರಾ, ಸವಿತಾ, ನಾಗರತ್ನಾ ಇತರರಿದ್ದರು.
ದೇವದುರ್ಗದ ಪಟೇಲ್ ಓಣಿಯ ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿ ಸೋಮವಾರ ಅಕ್ಷತೆಪಾತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಅಕ್ಷರಾಭ್ಯಾಸ ಮಾಡಿಸಿದರು. ಶಿಕ್ಷಕರಾದ ಪವಿತ್ರಾ, ಸವಿತಾ, ನಾಗರತ್ನಾ ಇತರರಿದ್ದರು.
Published on
ದೇವದುರ್ಗ: ಪಟ್ಟಣ ಸೇರಿ ತಾಲೂಕಾದ್ಯಂತ ಸೋಮವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಶಾಲಾವರಣದಲ್ಲಿ ಭಾನುವಾರವೇ ಸ್ವಚ್ಛತೆ ಕೈಗೊಂಡಿದ್ದ ಶಿಕ್ಷಕರು ಸೋಮವಾರ ಬೆಳಗ್ಗೆ ಶಾಲೆಗೆ ತಳಿರು ತೋರಣದಿಂದ ಸಿಂಗರಿಸಿ ಮಕ್ಕಳನ್ನು ಬರಮಾಡಿಕೊಂಡರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ರಂಗೋಲಿ ಬಿಡಿಸಿ ಸ್ವಾಗತ ಗೇಟ್‌ಗೆ ತೆಂಗಿನ ಗರಿ, ಮಾವಿನ ತೋರಣದಿಂದ ಶೃಂಗರಿಸಲಾಗಿತ್ತು. ನಂತರ ಶಾಲೆಗೆ ಬಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲಾಯಿತು. ಮೊದಲ ದಿನ ಬಿಸಿಯೂಟದ ಸಿಹಿ ಅಡುಗೆ ಮಾಡಲಾಗಿತ್ತು. 
ಪಟೇಲ್ ಓಣಿಯ  ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಉರ್ದು ಶಾಲೆಯಲ್ಲಿ  ಪ್ರಾರಂಭೋತ್ಸವ ಜರುಗಿತು. ಎಸ್ಡಿಎಂಸಿ ಅಧ್ಯಕ್ಷ  ಸಾಬಯ್ಯ, ಮುಖ್ಯಶಿಕ್ಷಕ ಶಾಂತಗೌಡ ನಾಗರಾಳ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಎಲ್‌ಕೆಜಿ, ಯುಕೆಜಿ ಹಾಗೂ ಒಂದೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಶಿಕ್ಷಕರು ಸ್ವತಃ ಅಕ್ಷತೆಪಾತ್ರೆಯಲ್ಲಿ ಅಕ್ಷರ ಅಭ್ಯಾಸ ಮಾಡಿಸಿ ಗಮನ ಸೆಳೆದರು. 
ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಪುರಸಭೆ ಮಾಜಿ ಸದಸ್ಯ ನಾಗರಾಜ್ ಗೋಗಿ, ಎಸ್ಡಿಎಂಸಿ ಅಧ್ಯಕ್ಷ ಸಾಬಣ್ಣ, ಉಪಾಧ್ಯಕ್ಷೆ ತಾಯಮ್ಮ, ಸದಸ್ಯರಾದ ಶಿವಾಜಿ, ರಮೇಶ್, ಬಸಪ್ಪ, ಮಲ್ಲಮ್ಮ, ರೇಷ್ಮಾ, ಶಂಕರ್ ನಾಗ್, ಶಿಕ್ಷಣ ಸಂಯೋಜಕ ಬಾಬು ಹಡಗಲಿ, ಶಿಕ್ಷಕರಾದ ಪವಿತ್ರಾ, ಸವಿತಾ, ನಾಗರತ್ನಾ, ಲಾಲ್ ಸಾಬ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net