ಮಕ್ಕಳಿಗೆ ಹೂ ನೀಡಿ ಬರಮಾಡಿಕೊಂಡ ಶಿಕ್ಷಕರು

 ರಾಯಚೂರಿನ ಸರ್ಕಾರಿ ಕರ್ನಾಟಕ ಪಬ್ಲಿಕ್ ಕೆಇಬಿ ಶಾಲೆಯಲ್ಲಿ  ಮುಖ್ಯ ಶಿಕ್ಷಕಿ ಶಶಿಕಲಾ ಮಕ್ಕಳಿಗೆ ಹೂ ನೀಡಿ ಸೋಮವಾರ ಬರಮಾಡಿಕೊಂಡರು. ಎಸ್‌ಡಿಎಂಸಿ ಅಧ್ಯಕ್ಷ ಸಣ್ಣ ನಾಗೇಂದ್ರಪ್ಪ, ಶಿಕ್ಷಕರಾದ ಮುಸ್ತಾಕ್ ಅಹೇಮದ, ಸುಮಾ,ಸುನಂದಾ ಇದ್ದರು.
ರಾಯಚೂರಿನ ಸರ್ಕಾರಿ ಕರ್ನಾಟಕ ಪಬ್ಲಿಕ್ ಕೆಇಬಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಶಶಿಕಲಾ ಮಕ್ಕಳಿಗೆ ಹೂ ನೀಡಿ ಸೋಮವಾರ ಬರಮಾಡಿಕೊಂಡರು. ಎಸ್‌ಡಿಎಂಸಿ ಅಧ್ಯಕ್ಷ ಸಣ್ಣ ನಾಗೇಂದ್ರಪ್ಪ, ಶಿಕ್ಷಕರಾದ ಮುಸ್ತಾಕ್ ಅಹೇಮದ, ಸುಮಾ,ಸುನಂದಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಯೂಟಕ್ಕೆ ಪಾಯಸ ವಿತರಣೆ
  • ಮೊದಲ ದಿನವೇ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು.
ರಾಯಚೂರು 2025-26 ನೇ ಸಾಲಿಗೆ ಶಾಲಾ ಪ್ರಾರಂಭೊತ್ಸವ ಹಿನ್ನಲೆ ಸೋಮವಾರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು.
ಮಕ್ಕಳ ಸ್ವಾಗತಕ್ಕಾಗಿ ತಳಿರು ತೋರಣಗಳಿಂದ ಶಾಲೆಗಳನ್ನು ಸಿಂಗಾರಗೊಳಿಸಲಾಗಿತ್ತು. ಶಾಲೆಗಳಲ್ಲಿ ಹಬ್ಬದ ವಾತಾರಣವಿತ್ತು. ಕಳೆದ ಎರಡು ದಿನಗಳಿಂದ ಶಾಲೆಗೆ ಬರುತ್ತಿರುವ ಶಿಕ್ಷಕ ವೃಂದ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸದಸ್ಯರು ಮಕ್ಕಳಿಗೆ ಸಿಹಿ ತಿನಿಸಿ ಶಾಲೆಗಳಿಗೆ ಬರಮಾಡಿಕೊಂಡರು.
ಆಕ್ಷರ ದಾಸೋಹದಿಂದ ಎಲ್ಲಾ ಶಾಲೆಗಳಿಗೆ ಬಿಸಿಯೂಟ ಪೂರೈಕೆಯಾಗಿದ್ದು, ಹೆಸರುಬೇಳೆ ಪಾಯಸ ಬಡಿಸಲಾಯಿತು.
ವಿದ್ಯಾರ್ಥಿಗಳು ಲವಲವಿಕೆಯಿಂದಲೇ ಶಾಲೆಗೆ ಬಂದಿದ್ದಾರೆ. ಎಲ್ಲಾ ಶಿಕ್ಷಕರು ಸಹ ಹಾಜರಿದ್ದು ಮಕ್ಕಳನ್ನು ಸ್ವಾಗತಿಸಿದರು. ಮೊದಲ ದಿನವೇ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಶಿಕ್ಷಕರು, ಕೆಲ ಶಾಲೆಗಳಲ್ಲಿ ಮಕ್ಕಳ ಜತೆ ಪೋಷಕರೂ ಆಗಮಿಸಿದ್ದರು. ಮಧ್ಯಾಹ್ನದ ಬಿಸಿಯೂಟದಲ್ಲೂ ಸಹಿಯ ಸವಿ ದೊರಕಿತು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net