4ತಿಂಗಳು ಗೈರಾದ ಶಿಕ್ಷಕಿ ಅಮಾನತಾಗಲಿ

ಲಿಂಗಸಗೂರು ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಶಶಿಕಲಾಗೆ ಕರವೇ ಬಂಡೇಬಾವಿ ಗ್ರಾಮ ಘಟಕದಿಂದ ಮನವಿ ಸಲ್ಲಿಸಲಾಯಿತು. ಘಟಕದ ಅಧ್ಯಕ್ಷ ನಿಂಗಾರೆಡ್ಡಿ, ಮುಖಂಡರಾದ ಕೆ.ವಿ ಕಳ್ಳಿಮಠ, ಮೌನೇಶ ಕಾಕಾನಗರ, ವೀರೇಶ ಮೇದಿನಾಪೂರ ಇದ್ದರು.
ಲಿಂಗಸಗೂರು ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಶಶಿಕಲಾಗೆ ಕರವೇ ಬಂಡೇಬಾವಿ ಗ್ರಾಮ ಘಟಕದಿಂದ ಮನವಿ ಸಲ್ಲಿಸಲಾಯಿತು. ಘಟಕದ ಅಧ್ಯಕ್ಷ ನಿಂಗಾರೆಡ್ಡಿ, ಮುಖಂಡರಾದ ಕೆ.ವಿ ಕಳ್ಳಿಮಠ, ಮೌನೇಶ ಕಾಕಾನಗರ, ವೀರೇಶ ಮೇದಿನಾಪೂರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರವೇ ಬಂಡೇಬಾವಿ ಗ್ರಾಮ ಘಟಕ ಆಗ್ರಹ
  • ಹಟ್ಟಿಚಿನ್ನದಗಣಿ ಬಂಡೇಬಾವಿ ಕರವೇ ಮನವಿ
ಹಟ್ಟಿಚಿನ್ನದಗಣಿ: ಸಮೀಪದ ಬಂಡೇಬಾವಿ ಗ್ರಾಮದ ಅಂಗನವಾಡಿ ಕೇಂದ್ರ-2ರಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿ ತಿಮ್ಮಮ್ಮ ಕಳೆದ ನಾಲ್ಕು ತಿಂಗಳಿನಿಂದ ಗೈರಾಗಿದ್ದು, ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕರವೇ ಗ್ರಾಮ ಘಟಕದಿಂದ ಲಿಂಗಸುಗೂರು ಸಿಡಿಪಿಒ (ಶಿಶು ಅಭಿವೃದ್ಧಿ ಯೋಜನಾಧಿಕಾರಿ) ಕಚೇರಿಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ಶಿಕ್ಷಕಿ ನಾಲ್ಕು ತಿಂಗಳಿನಿಂದ ಗೈರಾಗಿದ್ದರೂ ಸಹ ಅವರ ಖಾತೆಗೆ ಪ್ರತಿ ತಿಂಗಳು ಸಂಬಳ ಜಮೆಯಾಗುತ್ತಿದ್ದು, ಇದರಿಂದ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷೃ ಎದ್ದು ಕಾಣುತ್ತಿದೆ. ಅಂಗನವಾಡಿ ಶಿಕ್ಷಕಿಯ ದೀರ್ಘಾವಧಿ ರಜೆಯಿಂದ ಮಕ್ಕಳಿಗೆ ಸಮರ್ಪಕವಾಗಿ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಅಲ್ಲದೆ, ಅವರ ಆರೋಗ್ಯದ ಕಾಳಜಿ ಬಗ್ಗೆ ಪಾಲಕರಲ್ಲಿ ಆತಂಕ ಎದುರಾಗಿದೆ.
ಹೀಗಾಗಿ ಗೈರಾದ ಶಿಕ್ಷಕಿ ತಿಮ್ಮಮ್ಮ ಅವರನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಬೇಕು ಅಥವಾ ಅಂಗನವಾಡಿ ಕೇಂದ್ರಕ್ಕೆ ಬೇರೊಬ್ಬ ಶಿಕ್ಷಕಿಯನ್ನು ನೇಮಕ ಮಾಡಬೇಕು.ಇಲ್ಲದಿದ್ದರೆ ಕಚೇರಿ ಮುಂದೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net