ದೇವದುರ್ಗ: ಪಟ್ಟಣದ ಶ್ರೀಮದ್ ಆನೆಗೊಂದಿ ಸಂಸ್ಥಾನ ಮಠದಲ್ಲಿ ಶ್ರೀಕಾಳಹಸ್ತೇಂದ್ರ ಮಹಾಸ್ವಾಮಿಗಳ 31ನೇ ವರ್ಷದ ಆರಾಧನಾ ಮಹೋತ್ಸವ ನಿಮಿತ್ತ ಭಾನುವಾರ ಸಾಮೂಹಿಕ ಉಪನಯನ ಕಾರ್ಯಕ್ರಮ ಜರುಗಿತು.
ಅಜೇಂದ್ರ ಸ್ವಾಮೀಜಿ ಮಾತನಾಡಿ, ಮಾನವ ಸಂಸ್ಕಾರದಿಂದ ಮನುಷ್ಯನಾಗಿ ಬದುಕಲು ಸಾಧ್ಯ. ಉತ್ತಮ ಸಂಸ್ಕಾರದಿಂದ ಸದೃಢ ಸಮಾಜ ನಿರ್ಮಾಣವಾಗಲಿದೆ. ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಿ ಸಮಾಜ ಹಾಗೂ ದೇಶದ ಆಸ್ತಿಯಾಗಿ ಬೆಳೆಸಬೇಕು. ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಬೇಕು ಎಂದರು.
ಅಯ್ಯಪ್ಪಯ್ಯ ಮಹಾಸ್ವಾಮಿ, ಶಿವಶಂಕರ ಮಹಾಸ್ವಾಮಿ ಹಿರೇಹಾಳಮಠ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಾಗಲಿಂಗಪ್ಪಚಾರಿ ಬೆವಿನಾಳ, ಈಶಪ್ಪ ಪತ್ತಾರ್ ಗುರುಗುಂಟಾ, ಸಿದ್ದರಾಮೇಶ್ ಪತ್ತಾರ್ ಸಿರವಾರ, ಗಂಗಾಧರ ಬಡಿಗೇರ್ ಹುನೂರು, ಸರ್ವಜ್ಞ, ಮೌನೇಶ್ ಪತ್ತಾರ್ ಮಸರಕಲ್ ಇತರರಿದ್ದರು.