ಮಕ್ಕಳಿಗೆ ಅರ್ಥವಾಗುವಂತೆ ಬೋಧನೆ ಮಾಡಿ

ಜಾಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗಣಿತ ಗಣಕ ತರಬೇತಿ ಕಾರ್ಯಾಗಾರವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಪ್ರಕಾಶ ಹೊನ್ನಟಗಿ ಉದ್ಘಾಟಿಸಿದರು. ಸಿಆರ್‌ಪಿಗಳಾದ ಅಶೋಕ್, ಸೋಮಶೇಖರ್, ಪ್ರಭುಲಿಂಗ, ಮಂಜುಳಾ, ಶಿಕ್ಷಕರಾದ ಸುವರ್ಣಾ, ಆಂಜನೇಯ ಇತರರಿದ್ದರು.
ಜಾಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗಣಿತ ಗಣಕ ತರಬೇತಿ ಕಾರ್ಯಾಗಾರವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಪ್ರಕಾಶ ಹೊನ್ನಟಗಿ ಉದ್ಘಾಟಿಸಿದರು. ಸಿಆರ್‌ಪಿಗಳಾದ ಅಶೋಕ್, ಸೋಮಶೇಖರ್, ಪ್ರಭುಲಿಂಗ, ಮಂಜುಳಾ, ಶಿಕ್ಷಕರಾದ ಸುವರ್ಣಾ, ಆಂಜನೇಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೋಧನೆ
  • ಗಣಿತ, ಇಂಗ್ಲಿಷ್, ವಿಜ್ಞಾನ
  • ಜಾಲಹಳ್ಳಿಯ ಕನ್ಯಾ ಸಮಾಹಿಪ್ರಾ ಶಾಲೆ
  • ಸಾಕ್ಷರತ ಇಲಾಖೆ

ಮಕ್ಕಳಿಗೆ ಅರ್ಥವಾಗುವಂತೆ ಬೋಧನೆ ಮಾಡಿ

ದೇವದುರ್ಗ: ವಿದ್ಯಾರ್ಥಿಗಳಿಗೆ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯ ಕಠಿಣವಾಗಿದ್ದು, ಶಿಕ್ಷಕರು ಅರ್ಥವಾಗುವಂತೆ ಸರಳವಾಗಿ ಬೋಧಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಪ್ರಕಾಶ ಹೊನ್ನಟಗಿ ಹೇಳಿದರು.
ಜಾಲಹಳ್ಳಿಯ ಕನ್ಯಾ ಸಮಾಹಿಪ್ರಾ ಶಾಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗಣಿತ-ಗಣಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಕರಿಗೆ ತಂತ್ರಾಂಶ ಆಧಾರಿತ ಗಣಿತ ಗಣಕ ತರಬೇತಿ ನೀಡಲಾಗುತ್ತಿದ್ದು, ಸದ್ಬಳಕೆ ಮಾಡಿಕೊಂಡು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು.ಇತ್ತೀಚೆಗೆ ಶಿಕ್ಷಕರು ಕೆಲಸದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ.
ಇದರ ಮಧ್ಯ ಶಿಕ್ಷಕರು ವೃತ್ತಿ ಗೌರವ ಬಿಡಬಾರದು. ಸರ್ಕಾರಿ ಶಾಲೆಯಲ್ಲಿ ಬಹುತೇಕ ಬಡ ಮಕ್ಕಳು ಓದುತ್ತಿದ್ದು, ನ್ಯಾಯ ಒದಗಿಸುವ ಜವಾಬ್ದಾರಿ ಇದೆ. ಮಾರ್ಗದರ್ಶನ ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಡಬೇಕು ಎಂದರು.
ಸಿಆರ್‌ಪಿಗಳಾದ ವೆಂಕಟಾಚಲ, ಅಶೋಕ್, ಸೋಮಶೇಖರ್, ಪ್ರಭುಲಿಂಗ, ಮಂಜುಳಾ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಷಣ್ಮುಖ ಮುಕ್ಕನಾಳ, ಪದವೀಧರ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದನಗೌಡ ಗಾಜಲದಿನ್ನಿ, ಶಿಕ್ಷಕರಾದ ಸುವರ್ಣಾ, ಆಂಜನೇಯ, ವಿಠೋಬ್ ನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net