ಸಿರವಾರ ಪಪಂ ಕಚೇರಿಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಪಪಂ ಅಧ್ಯಕ್ಷ ಹಾಜಿಚೌದ್ರಿ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಸದಸ್ಯ ಮಾರ್ಕಂಡೆಪ್ಪ, ಕೃಷ್ಣ ನಾಯಕ ಇತರರಿದ್ದರು.
ಸಿರವಾರ: ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಅಧ್ಯಕ್ಷ ವೈ.ಭೂಪನಗೌಡ ಹೇಳಿದರು.
ಪಪಂ ಕಚೇರಿಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳನ್ನು ಹೇಗೆ ಬೆಳಸಬೇಕು ಎಂಬುದಕ್ಕೆ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿ ಮಾದರಿ.
ಇಂದಿನ ಮಕ್ಕಳಿಗೆ ತಾಯಿಂದಿರು ಮಾನವಿಯ ಮೌಲ್ಯ ಬೆಳೆಸುತ್ತಿಲ್ಲ. ಮಕ್ಕಳಿಗೆ ಧರ್ಮ, ಕರ್ತವ್ಯ ಏನು ಎಂಬುವುದನ್ನು ತಿಳಿಸಬೇಕಾಗಿದೆ. ಶಿವಾಜಿ ಮಹಾರಾಜರ ಧೈರ್ಯ, ಸಾಹಸಗಳ ಕುರಿತು ತಿಳಿಹೇಳಬೇಕು ಎಂದರು.
ಪಪಂ ಅಧ್ಯಕ್ಷ ಹಾಜಿಚೌದ್ರಿ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಸದಸ್ಯ ಮಾರ್ಕಂಡೆಪ್ಪ, ಕೃಷ್ಣ ನಾಯಕ, ಸುರೇಶ ಶೆಟ್ಟಿ, ಸಿಬ್ಬಂದಿ ಸುನೀತಾ, ಚಾಂದ್‌ಸಾಬ್, ಮುಖಂಡರಾದ ಮಲ್ಲಪ್ಪ, ಜ್ಞಾನಪ್ಪ ಇತರರಿದ್ದರು.