ಸಿಂದನೂರಿನಲ್ಲಿ 16.20 ಲಕ್ಷ ರೂ. ಕರ ವಸೂಲಿ

ಉಮಲೂಟಿ ಗ್ರಾಪಂಯಲ್ಲಿ ಗುರುವಾರ ಕರವಸೂಲಿ ಅಭಿಯಾನಕ್ಕೆ  ತಾಪಂ ಇಒ ಚಂದ್ರಶೇಖರ ಚಾಲನೆ ನೀಡಿದರು. ಎಪಿಎಂಸಿ ಮಾಜಿ ಸದಸ್ಯ ಶಂಕರಗೌಡ, ಪಿಡಿಒ ಮಹಾಂತೇಶ ಇದ್ದರು.
ಉಮಲೂಟಿ ಗ್ರಾಪಂಯಲ್ಲಿ ಗುರುವಾರ ಕರವಸೂಲಿ ಅಭಿಯಾನಕ್ಕೆ ತಾಪಂ ಇಒ ಚಂದ್ರಶೇಖರ ಚಾಲನೆ ನೀಡಿದರು. ಎಪಿಎಂಸಿ ಮಾಜಿ ಸದಸ್ಯ ಶಂಕರಗೌಡ, ಪಿಡಿಒ ಮಹಾಂತೇಶ ಇದ್ದರು.
Published on
ಸಿಂಧನೂರು: ತಾಲೂಕಿನ ಉಮಲೂಟಿಯಲ್ಲಿ ಗುರುವಾರ ಕರವಸೂಲಿ ಅಭಿಯಾನಕ್ಕೆ ತಾಪಂ ಇಒ ಚಂದ್ರಶೇಖರ ಚಾಲನೆ ನೀಡಿದರು.
ಸಹಾಯಕ ನಿರ್ದೇಶಕ ಅಮರ ಗುಂಡಪ್ಪ ಅವರು ಒಂದು ತಂಡ ಮಾಡಿಕೊಂಡು ರಾಗಲಪರ್ವಿ ಗ್ರಾಮಕ್ಕೆ ಭೇಟಿ ನೀಡಿ ಸಿಬ್ಬಂದಿಯೊಂದಿಗೆ ಕರ ವಸೂಲಿ ಮಾಡಿದರು. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಗುರುವಾರ ಒಂದೇ ದಿನ 16.20 ಲಕ್ಷ ರೂ.ಕರ ವಸೂಲಿ ಮಾಡಲಾಯಿತು.
ಇಒ ಚಂದ್ರಶೇಖರ ಮಾತನಾಡಿ, ಕರ್ನಾಟಕದ ಪ್ರತಿ ಗ್ರಾಪಂಗಳಲ್ಲಿ ತೆರಿಗೆ ಮತ್ತು ಕರಗಳ ಸಂಗ್ರಹಣೆಗೆ ನಡೆಸುವ ವಿಶೇಷ ಚಳವಳಿಯಾಗಿದೆ. ಇದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾರ್ಗದರ್ಶನದಲ್ಲಿ ಜಿಪಂಗಳ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿನ ವ್ಯಾಪಾರ, ಸೇವೆಗಳು, ಆಸ್ತಿಗಳ ಮೇಲಿನ ಶುಲ್ಕ ಗಳನ್ನು ಸಮರ್ಪಕವಾಗಿ ವಸೂಲಿ ಮಾಡುವುದು ಇದರ ಉದ್ದೇಶವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net