ಆ.30 ರಂದು ಪ್ರತಿಭಾ ಪುರಸ್ಕಾರ

ಹನುಮಂತಪ್ಪ ಜಾಲಿಬೆಂಚಿ
ಹನುಮಂತಪ್ಪ ಜಾಲಿಬೆಂಚಿ
Published on

ಜಿಲ್ಲಾ ಕುರುಬ ಸಂಘ ಮತ್ತು ಜಿಲ್ಲಾ ಸರ್ಕಾರಿ ಕನಕ ನೌಕರರ ಸಂಘದಿಂದ ಆ.30 ರಂದು ಬೆಳಗ್ಗೆ 10:30ಕ್ಕೆ ನಗರದ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆಂದು ಸಂಘದ ಕಾರ್ಯಾಧ್ಯಕ್ಷ ಹನುಮಂತಪ್ಪ ಜಾಲಿಬೆಂಚಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಎಸ್ ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ನಿವೃತ್ತ ನೌಕರರು, ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.
ಹೊಸದಾಗಿ ಪಿಎಸ್‌ಐ ನೇಮಕಗೊಂಡವರು ಎಂಬಿಬಿಎಎಸ್, ಎಂಡಿ ತೇರ್ಗಡೆ ಹೊಂದಿದ ಸಮಾಜ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಗುತ್ತದೆ. ಸಮಾಜದ ಗುರುಗಳು, ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಗಣ್ಯರು ಭಾಗವಹಿಸಲಿದಾರೆ. 250 ವಿದ್ಯಾರ್ಥಿಗಳು ಈಗಾಗಲೇ ನೊಂದಣಿ ಪಡೆದಿದ್ದಾರೆ. ಇನ್ನೂ ಕೆಲವರು ನೊಂದಣಿ ಮಾಡಿಕೊಂಡಿಲ್ಲ. ಸರಿ ಸುಮಾರು 300ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕೆ.ಬಸವಂತಪ್ಪ,ಪ್ರಮುಖರಾದ ರಾಮನಗೌಡ, ಹನುಮಂತಪ್ಪ, ವೆಂಕಟೇಶ ಜಾಲಿಬೆಂಚಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net