ತಲೇಖಾನ್ ಗ್ರಾಪಂ ಅಧ್ಯಕ್ಷೆ ಅನರ್ಹತೆ ಆದೇಶಕ್ಕೆ ತಡೆ

ದೇವಪ್ಪ ರಾಠೋಡ
ದೇವಪ್ಪ ರಾಠೋಡ
Published on
ಮಸ್ಕಿ: ತಲೇಖಾನ್ ಗ್ರಾಪಂ ಅಧ್ಯಕ್ಷೆ ಉಮ್ಮವ್ವ ಗ್ಯಾನಪ್ಪ ರಾಠೋಡ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕಲಬುರಗಿ ಹೈಕೋರ್ಟ್ ಪೀಠ ನ.26 ರಂದು ತಡೆಯಾಜ್ಞೆ ನೀಡಿದೆ ಎಂದು ತಾಪಂ ಕೆಡಿಪಿ ಸದಸ್ಯ ದೇವಪ್ಪ ರಾಠೋಡ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 15ನೇ ಹಣಕಾಸು, ನರೇಗಾ ಯೋಜನೆ ಸೇರಿ ವಿವಿಧ ಕಾಮಗಾರಿಗಳಲ್ಲಿ ಸೂಕ್ತ ದಾಖಲೆ ಇಲ್ಲದೆ ಹಣ ಪಾವತಿಸಲಾಗಿದೆ ಎನ್ನುವ ಆರೋಪದ ಮೇಲೆ ಗ್ರಾಪಂ ಅಧ್ಯಕ್ಷೆ ಉಮ್ಮವ್ವಳ ಸದಸ್ಯತ್ವ ರದ್ದು ಪಡಿಸಲಾಗಿತ್ತು.
ಈ ಆದೇಶಕ್ಕೆ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಧಿಕಾರಿಗಳು ಮಾಡಿದ ಲೋಪಗಳನ್ನು ಅಧ್ಯಕ್ಷೆ ಮೇಲೆ ಹಾಕಲು ಪ್ರಯತ್ನಿಸಲಾಗಿದೆ ಎಂದು ದೇವಪ್ಪ ರಾಠೋಡ್ ಆರೋಪಿಸಿದರು.
ಗ್ರಾಪಂ ಸದಸ್ಯರಾದ ದುರುಗಪ್ಪ, ವೀರನಗೌಡ, ಮೌನೇಶ ಭೋಗಾಪುರ, ಹನುಮಂತ ಗಂಟಿ, ಕನಕಪ್ಪ ಗುಡಿಹಾಳ, ವೆಂಕಟೇಶ ದೇಸಾಯಿ ಹಾಗೂ ಮಾನ್‌ಸಿಂಗ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net