ಜಂತುಹುಳು ನಿವಾರಣೆಗೆ ಮಾತ್ರೆ ಸೇವಿಸಿ

ದೇವದುರ್ಗದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣೆಗೆ ಮಾತ್ರೆ ವಿತರಿಸಲಾಯಿತು. ಟಿಎಚ್‌ಒ ಡಾ.ಬನದೇಶ್ವರ, ವೈದ್ಯಾಧಿಕಾರಿ ಡಾ.ನಿರ್ಮಲಾದೇವಿ, ಮುಖ್ಯಶಿಕ್ಷಕ ನಾಗರಾಜ ಪಾಟೀಲ್, ಶಿಕ್ಷಕರಾದ ತಿರುಪತಿ ಸೂಗೂರು, ಡಾ.ತ್ಯಾಗರಾಜ್, ಆರೋಗ್ಯ ಇಲಾಖೆ ನೌಕರರಾದ ಶಿವಪ್ಪ, ಗೀತಮ್ಮ, ಚನ್ನಬಸಯ್ಯ ಹಿರೇಮಠ ಇತರಿರದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಾತ್ರೆ ಸೇವಿಸಿ

ಜಂತುಹುಳು ನಿವಾರಣೆಗೆ ಮಾತ್ರೆ ಸೇವಿಸಿ

ದೇವದುರ್ಗ: ಒಂದರಿಂದ 18ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಜಂತುಹುಳು ನಿವಾರಣೆಗೆ ಅಲ್ಬೆಂಡೋಜೋಲ್ ಮಾತ್ರೆ ಸೇವಿಸಬೇಕು. ಇದರ ಬಗ್ಗೆ ಮಕ್ಕಳಿಗೆ ಅಗತ್ಯ ತಿಳಿವಳಿಕೆ ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಜಂತುಹುಳುವಿನ ಬಾಧೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ರಕ್ತಹೀನತೆ, ಅಪೌಷ್ಟಿಕತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ತೂಕದಲ್ಲಿ ಇಳಿಕೆ ಮತ್ತು ನಿಶಕ್ತಿ ಉಂಟಾಗುತ್ತದೆ. ಆದ್ದರಿಂದ ವರ್ಷದಲ್ಲಿ 2 ಬಾರಿ ಜಂತುಹುಳು ನಿವಾರಣೆ ಮಾತ್ರೆ ಸೇವಿಸಬೇಕು.
1-2 ವರ್ಷದ ಮಕ್ಕಳಿಗೆ 200ಎಂಜಿ ಅರ್ಧ ಮಾತ್ರೆಯನ್ನು ಪುಡಿಮಾಡಿ ನೀರಿನೊಂದಿಗೆ ಕುಡಿಸಬೇಕು. 2-3ವರ್ಷದ ಮಕ್ಕಳಿಗೆ 400ಎಂಜಿ ಮಾತ್ರೆ ನೀರಲ್ಲಿ ಕೊಡಬೇಕು. 3-19ವರ್ಷದ ಮಕ್ಕಳಿಗೆ 400ಎಂಜಿ ಅಲ್ಬೆಂಡೋಜೋಲ್ ಮಾತ್ರೆ ಚೀಪಲು ಕೊಡಬೇಕು. ಮಕ್ಕಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ವೈದ್ಯಾಧಿಕಾರಿ ಡಾ.ನಿರ್ಮಲಾದೇವಿ, ಮುಖ್ಯಶಿಕ್ಷಕ ನಾಗರಾಜ ಪಾಟೀಲ್, ಶಿಕ್ಷಕರಾದ ತಿರುಪತಿ ಸೂಗೂರು, ಡಾ.ತ್ಯಾಗರಾಜ್, ಆರೋಗ್ಯ ಇಲಾಖೆ ನೌಕರರಾದ ಶಿವಪ್ಪ, ಗೀತಮ್ಮ, ಸೋಮಪ್ಪ, ಚಂದ್ರಮಪ್ಪ, ಚನ್ನಬಸಯ್ಯ ಹಿರೇಮಠ್, ಓಂಕಾರ್, ಸುಲೋಚನಾ, ದೀಪಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net