ಭಕ್ತರಿಗೆ ತೊಂದರೆ ಆಗದಂತೆ ಕ್ರಮವಹಿಸಿ

ಹುಲಿಗೆಮ್ಮ ದೇವಿ ಜಾತ್ರೆ ನಿಮಿತ್ತ ತೊಂಡಿಹಾಳ ಗ್ರಾಮಕ್ಕೆ ಎಎಸ್ಪಿ ಕುಮಾರಸ್ವಾಮಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಹುಲಿಗೆಮ್ಮ ದೇವಿ ಜಾತ್ರೆ ನಿಮಿತ್ತ ತೊಂಡಿಹಾಳ ಗ್ರಾಮಕ್ಕೆ ಎಎಸ್ಪಿ ಕುಮಾರಸ್ವಾಮಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
Published on
ಮುದಗಲ್: ಲಿಂಗಸುಗೂರ ತಾಲೂಕಿನ ಗಡಿ ಭಾಗವಾದ ತೊಂಡಿಹಾಳ ಹುಲಿಗೆಮ್ಮ ದೇವಿ ಜಾತ್ರೆ ಜ.18ರಂದು ಜರುಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎಎಸ್ಪಿ (ಕಾನೂನು, ಶಿಸ್ತು) ಕುಮಾರಸ್ವಾಮಿ ಶುಕ್ರವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. 
ಜಾತ್ರೆಯಲ್ಲಿ ತೆಗೆದುಕೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮ, ಸಂಚಾರ ವ್ಯವಸ್ಥೆ, ಜಾತ್ರೆ ವಿಧಿವಿಧಾನಗಳ ಕುರಿತು ಪರಿಶೀಲಿಸಿದರು. ಅನಿಷ್ಠ ಪದ್ಧತಿಗಳು, ತಾಲೂಕು ಆಡಳಿತದಿಂದ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದರು. 
ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಭಕ್ತರ ವಾಹನಗಳು, ಸಂಚಾರಕ್ಕೆ ಇಕ್ಕಟ್ಟಾದ ರಸ್ತೆಗಳನ್ನು ಪರಿಶೀಲಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯ ಪೊಲೀಸರಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net