ಇತ್ತೀಚೆಗೆ ಸುರಿದ ಮಳೆಗೆ ಚರಂಡಿಗಳು ಹಾಳಾಗಿದ್ದು, ಬ್ಲಾಕ್ ಆಗಿವೆ. ಹಲವು ವಾರ್ಡ್‌ಗಳು ಮೂಲ ಸೌಕರ್ಯಗಳ ಕೊರತೆ ಕಾಡುತ್ತಿವೆ ಎಂದು ಸದಸ್ಯರು ದೂರಿದರು. ಪಟ್ಟಣದ 23 ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಮಳೆಗೆ ರಸ್ತೆ, ಚರಂಡಿ ಹಾಳಾಗಿದ್ದು, ದುರಸ್ತಿಗೆ ಮೊದಲ ಆದ್ಯತೆ ನೀಡುವುದಾಗಿ ಮಲ್ಲಯ್ಯ ಭರವಸೆ ನೀಡಿದರು. ಪಟ್ಟಣದ ಮುಖ್ಯ ವೃತ್ತಗಳ ಬಳಿ ಪರವಾನಗಿ ಪಡೆಯದೆ ಬ್ಯಾನರ್ ಅಳವಡಿಸುತ್ತಿದ್ದು, ಗ್ರಾಮದ ಸೌಂದರ್ಯ ಹಾಳಾಗುತ್ತಿದೆ. ಪುರಸಭೆ ಅನುಮತಿ ಇಲ್ಲದೆ ಬ್ಯಾನರ್ ಅಳವಡಿಕೆಗೆ ಕಡಿವಾಣ ಹಾಕಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು.