ಸೌಲತ್ತುಗಳ ಸದ್ಬಳಕೆ ಮಾಡಿಕೊಳ್ಳಿ

ಕವಿತಾಳ ಸಮೀಪದ ಚಿಕ್ಕದಿನ್ನಿ ಗ್ರಾಮದಲ್ಲಿ ಸಹಿಪ್ರಾ ಶಾಲೆ ಕಟ್ಟಡವನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ನಭಿರಸೂಲ್, ಮುಖ್ಯಶಿಕ್ಷಕ ಶಿವರಾಜ ಗುಡದೂರು ಇತರರಿದ್ದರು.
ಕವಿತಾಳ ಸಮೀಪದ ಚಿಕ್ಕದಿನ್ನಿ ಗ್ರಾಮದಲ್ಲಿ ಸಹಿಪ್ರಾ ಶಾಲೆ ಕಟ್ಟಡವನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ನಭಿರಸೂಲ್, ಮುಖ್ಯಶಿಕ್ಷಕ ಶಿವರಾಜ ಗುಡದೂರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿಕೆ
  • ಚಿಕ್ಕದಿನ್ನಿ ಸಹಿಪ್ರಾ ಶಾಲೆ ಕಟ್ಟಡ ಉದ್ಘಾಟನೆ
ಕವಿತಾಳ: ಶೈಕ್ಷಣಿಕ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಸೌಲತ್ತುಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಸಮೀಪದ ಚಿಕ್ಕದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕೆಕೆಆರ್‌ಡಿಬಿ ಯೋಜನೆಯಡಿ 28 ಲಕ್ಷ ರೂ. ವೆಚ್ಚದ ಎರಡು ಕಟ್ಟಡವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಬುಕ್ ವಿತರಿಸಿ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ನಭಿರಸೂಲ್, ಪ್ರಥಮದರ್ಜೆ ಗುತ್ತಿಗೆದಾರ ಬಲವಂತರಾಯಗೌಡ ವಟಗಲ್, ಪಿಡಿಒ ಲಕ್ಷಣ, ಮುಖ್ಯಶಿಕ್ಷಕ ಶಿವರಾಜ ಗುಡದೂರು, ಪ್ರಮುಖರಾದ ಆಂಜನೇಯ ಸಾಹುಕಾರ, ಚಾಂದಸಾಬ್, ಆದಪ್ಪ, ಯಮನೂರಸಾಬ್, ಯಂಕರಡ್ಡಿ, ರಂಜಾನ್‌ಸಾಬ್, ಅಯ್ಯಣ್ಣ, ಗೋವಿಂದಪ್ಪ, ನಾಗಪ್ಪ ಯಲ್ಲಪ್ಪ, ನಿರುಪಾದೆಪ್ಪ ವಕೀಲ, ಭೀಮೇಶ ನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net