ಗ್ರಾಪಂ ಕಾರ್ಯದರ್ಶಿ ವಿರುದ್ಧ ಕ್ರಮವಹಿಸಿ

ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿ ಪ್ರಥಮ ದರ್ಜೆ ಸಹಾಯಕಿ ಅನುಪಮಾ ಸಿಂಗ್ ಅವರಿಗೆ  ಭಾರತೀಯ ಪ್ರಜಾ ಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿ ಪ್ರಥಮ ದರ್ಜೆ ಸಹಾಯಕಿ ಅನುಪಮಾ ಸಿಂಗ್ ಅವರಿಗೆ ಭಾರತೀಯ ಪ್ರಜಾ ಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ಸರ್ಜಾಪೂರ ಗ್ರಾಪಂನಲ್ಲಿ ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಗ್ರೇಡ್-2 ಕಾರ್ಯದರ್ಶಿಗೆ ಧ್ವಜಾರೋಹಣ ನೆರವೇರಿಸಲು ಆದೇಶ ನೀಡಿದ್ದರೂ, ಖಾಸಗಿ ವ್ಯಕ್ತಿಯಿಂದ ಧ್ವಜಾರೋಹಣ ನೆರವೇರಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಹಾಯಕ ಆಯುಕ್ತರ ಕಚೇರಿ ಪ್ರಥಮ ದರ್ಜೆ ಸಹಾಯಕಿ ಅನುಪಮಾ ಸಿಂಗ್ ಅವರಿಗೆ ಭಾರತೀಯ ಪ್ರಜಾ ಸಂಘದ ಕಾರ್ಯಕರ್ತರು ಗುರುವಾರ ಮನವಿ ಸಲ್ಲಿಸಿದರು.

ಧ್ವಜಾರೋಹಣ ನೆರವೇರಿಸಲು ಗ್ರೇಡ್-2 ಕಾರ್ಯದರ್ಶಿ ಕಾಸಿಂ ಪೀರ್ ಅವರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಮಾಡಿದ್ದರು. ಆದರೆ, ಕಾಸಿಂ ಪೀರ್ ಅವರು ಖಾಸಗಿ ವ್ಯಕ್ತಿಗೆ ಧ್ವಜಾರೋಹಣಕ್ಕೆ ಅವಕಾಶ ನೀಡಿದ್ದಾರೆ. ಕರ್ತವ್ಯಲೋಪವೆಸಗಿದ ಸರ್ಕಾರಿ ನೌಕರನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಮೌನೇಶ ಹೊನ್ನಳ್ಳಿ, ಜಿಲ್ಲಾಧ್ಯಕ್ಷ ಹೊಳೆಯಪ್ಪ ಕೆ., ಗೌರವಾಧ್ಯಕ್ಷ ಭೀಮಣ್ಣ ಕೆ., ಶರಣಪ್ಪ, ದೇವಪ್ಪ ಕಾವಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net