ಕಳಪೆ ಬಿತ್ತನೆ ಬೀಜ ಮಾರಾಟಗಾರರ ವಿರುದ್ಧ ಕ್ರಮವಹಿಸಿ

ಮಾನ್ವಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ ಭೂಸನೂರ  ಅವರಿಗೆ ಕರ್ನಾಟಕ ರೈತ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಸಿದ್ದಯ್ಯಸ್ವಾಮಿ ಗೋರ್ಕಲ್, ರೈತರಾದ ಭೀಮಣ್ಣ, ಮಲ್ಲೇಶನಾಯಕ, ದೇವರಾಜ ಇನ್ನಿತರರಿದ್ದರು.
ಮಾನ್ವಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ ಭೂಸನೂರ ಅವರಿಗೆ ಕರ್ನಾಟಕ ರೈತ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಸಿದ್ದಯ್ಯಸ್ವಾಮಿ ಗೋರ್ಕಲ್, ರೈತರಾದ ಭೀಮಣ್ಣ, ಮಲ್ಲೇಶನಾಯಕ, ದೇವರಾಜ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ
  • ಸಹಾಯಕ
  • ನಿರ್ದೇಶಕ
ಮಾನ್ವಿ: ತಾಲೂಕಿನ ವಿವಿಧ ಕಡೆ ಕಳಪೆ ಬಿತ್ತನೆ ಬೀಜ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿದ್ದಯ್ಯಸ್ವಾಮಿ ಗೋರ್ಕಲ್ ಆಗ್ರಹಿಸಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ರೈತ ಸಂಘದ ತಾಲೂಕು ಘಟಕದಿಂದ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಗುರುನಾಥ ಭೂಸನೂರಗೆ ಮನವಿ ಸಲ್ಲಿಸಿ ಮಾತನಾಡಿದರು.
ನಕಲಿ ಬಿತ್ತನೆ ಬೀಜಗಳಿಂದ ಇಳುವರಿ ಕಡಿಮೆಯಾಗುತ್ತಿದೆ. ಬೆಳೆಗೆ ಖರ್ಚು ಮಾಡಿದ ಹಣ ಬಾರದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ತಾಲೂಕಿನ ರಾಜಲಬಂಡ ಗ್ರಾಮದ ರೈತ ಭೀಮಣ್ಣ ಪಟ್ಟಣದ ಅಂಗಡಿಯೊಂದರಿಂದ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದು ಬೀಜ ನಕಲಿಯಾಗಿದ್ದರಿಂದ ಬೆಳೆಯಲ್ಲಿ ಕಾಳು ಕಟ್ಟದೆ ರೈತನಿಗೆ ನಷ್ಟ್ಟವಾಗಿದೆ. ಸಂಬಂಧಿಸಿದ ವ್ಯಾಪಾರಿ ವಿರುದ್ಧ ಕ್ರಮ ಕೈಗೊಂಡು ರೈತನಿಗೆ ಪರಿಹಾರ ಕೊಡಿಸುವಂತೆ ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net