ರುದ್ರಭೂಮಿ ದಾರಿ ಪರಿಶೀಲಿಸಿದ ತಹಸೀಲ್ದಾರ್

ಹೂನೂರು ಗ್ರಾಮದ ರುದ್ರಭೂಮಿಗೆ ತೆರಳುವ ರಸ್ತೆ ವಿವಾದದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸತ್ಯಮ್ಮ ಭೇಟಿ ನೀಡಿ ಪರಿಶೀಲಿಸಿದರು. ಉಪತಹಶೀಲ್ದಾರ್ ತುಳುಜಾರಾಮ್ ಸಿಂಗ್, ಮಸ್ಕಿ ವೃತ್ತ ನಿರೀಕ್ಷಕ ರಾಮಣ್ಣ ಜಲಗಾರ, ಮುದಗಲ್ ಪಿ.ಎಸ್.ಐ ವೆಂಕಟೇಶ ಮಾಡಗಿರಿ, ನಾಡತಹಸೀಲ್ದಾರ್ ತುಳುಜಾರಾಮ್ ಸಿಂಗ್,ಗ್ರಾಮ ಆಡಳಿತಾಧಿಕಾರಿ ಸಂಗಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತೆರಳುವ
  • ರಸ್ತೆ
  • ವಿವಾದ
ಮುದಗಲ್: ಹೂನೂರು ಗ್ರಾಮದ ರುದ್ರಭೂಮಿಗೆ ತೆರಳುವ ರಸ್ತೆ ವಿವಾದದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸತ್ಯಮ್ಮ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆ ಸ.ನಂ 96ರಲ್ಲಿ ಸುಮಾರು 34ಗುಂಟೆ ಜಮೀನಿನಲ್ಲಿ ಸ್ಮಶಾನವಿದ್ದು, ರಸ್ತೆ ಪಕ್ಕದ ಜಮೀನಿನ ಮಾಲೀಕರೊಬ್ಬರು ಸ್ಮಶಾನಕ್ಕೆ ತೆರಳುವ ರಸ್ತೆ ಗುರುತಿಸಿ, ಶವ ತೆಗೆದುಕೊಂಡು ಹೋಗಿ ಎಂದು ವಿರೋಧ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆ ಸ್ಥಳಕ್ಕೆ ತಹಸೀಲ್ದಾರ್ ಸತ್ಯಮ್ಮ ಭೇಟಿ ನೀಡಿ ಪರಿಶೀಲಿಸಿ 2-3ದಿನಗಳಲ್ಲಿ ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ಸರ್ವೇ ಮಾಡಿ ಹದ್ದುಬಸ್ತು ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net