ಕ್ಯಾನ್‌ಗಳಿಗೆ ಇಂಧನ ಹಾಕಿಸಿದ ತಹಶೀಲ್ದಾರ್

ರಾಯಚೂರಿನಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ  ಡಿಸೇಲ್ ಕೊರತೆ ಇದೆ ಎಂಬ ಕಾರಣಕ್ಕೆ ಗ್ರಾಹಕರು ಏಕಾಏಕಿ ಕ್ಯಾನ್‌ಗಳಿಂದ ಇಂಧನ ತುಂಬಿಸಿಕೊಳ್ಳಲು ಮುಗಿಬಿದ್ದಿರುವುದು.
ರಾಯಚೂರಿನಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಡಿಸೇಲ್ ಕೊರತೆ ಇದೆ ಎಂಬ ಕಾರಣಕ್ಕೆ ಗ್ರಾಹಕರು ಏಕಾಏಕಿ ಕ್ಯಾನ್‌ಗಳಿಂದ ಇಂಧನ ತುಂಬಿಸಿಕೊಳ್ಳಲು ಮುಗಿಬಿದ್ದಿರುವುದು.
Published on
ರಾಯಚೂರು ನಗರದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಡಿಸೇಲ್ ಕೊರತೆ ಇದೆ ಎಂಬ ಕಾರಣಕ್ಕೆ ಗ್ರಾಹಕರು ಏಕಾಏಕಿ ಕ್ಯಾನ್‌ಗಳಿಂದ ಇಂಧನ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದು, ತಹಶೀಲ್ದಾರ್ ಸುರೇಶ ವರ್ಮಾ ನೇತೃತ್ವದಲ್ಲಿ ಕ್ಯಾನ್‌ಗಳಿಗೆ ಇಂಧನ ಹಾಕಿದರು.
ಪೆಟ್ರೋಲ್,ಡಿಸೇಲ್ ಕೊರತೆಯಾಗಬಹುದು ಎಂದುಕೊಂಡು ವಾಹನ ಸವಾರರು, ನಗರದ ಸುತ್ತಮುತ್ತದ ಪ್ರದೇಶಗಳಿಂದ ಆಗಮಿಸಿ, ಡಿಸೇಲ್ ತುಂಬಿಸಿಕೊಳ್ಳಲು ಮುಗಿಬಿದ್ದರೆ. ಮತ್ತೊಂದೆಡೆ, ರೈತರು ಮತ್ತು ಇತರೆ ವಾಹನ ಸವಾರರು, ಕ್ಯಾನ್ ಅಥವಾ ಡಬ್ಬಿಗಳಿಗೆ ಪೆಟ್ರೋಲ್ ಅಥವಾ ಡಿಸೇಲ್ ಹಾಕುವುದಿಲ್ಲ ಎಂಬ ಕಾರಣಕ್ಕೆ ತೀವ್ರ ಆಕ್ರೋಶಗೊಂಡ ಘಟನೆ ನಡೆಯಿತು.

ರೈಲ್ವೆ ನಿಲ್ದಾಣ ರಸ್ತೆಯ ಪೆಟ್ರೋಲ್ ಬಂಕ್ ಸೇರಿದಂತೆ ಅನೇಕ ಬಂಕ್‌ಗಳಲ್ಲಿ ಜನರು ಮುಗಿಬಿದ್ದರು. ಡಿಸೇಲ್ ಪೂರೈಕೆಯಲ್ಲಿ ಆಗಿರುವ ವ್ಯತ್ಯಾಸದಿಂದ ಜನರು ಖರೀದಿಸಲು ಮುಗಿಬಿದ್ದರು. ಇತ್ತೀಚೆಗೆ ಪೆಟ್ರೋಲ್ ಮತ್ತು ಡಿಸೆಲ್ ಕೊರತೆಯಿಂದಾಗಿ, ಕ್ಯಾನ್ ಗಳು ಮತ್ತು ಡಬ್ಬಿಗಳಿಗೆ ಪೆಟ್ರೋಲ್ ಹಾಕಬಾರದು ಎಂದು ಡಿಸಿ ಎಸ್. ಪೂವಿತಾ ಆದೇಶ ಹೊರಡಿಸಿದ್ದರು.
ಇದರಿಂದ ಸಾಮಾನ್ಯ ವಾಹನ ಚಾಲಕರಿಗೆ ಅಷ್ಟೇನು ತೊಂದರೆಯಾಗಲಿಲ್ಲ. ಆದರೆ. ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸುವ ರೈತರು, ತಮ್ಮ ಯಂತ್ರೋಪಕರಣಗಳು ಮತ್ತು ಜಮೀನಿನಲ್ಲಿ ಕೆಲಸ ಮಾಡುವ ಟ್ರ್ಯಾಕ್ಟರ್‌ಗಳಿಗೆ ಡಿಸೇಲ್ ಪಡೆಯಲು ಬಹಳ ತೊಂದರೆ ಉಂಟಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ತಿಳಿಯುತಿದ್ದಂತೆ ತಹಶೀಲ್ದಾರ್ ಸುರೇಶ ವರ್ಮಾ ಸ್ಥಳಕ್ಕೆ ಆಗಮಿಸಿ ರೈತರ ಕ್ಯಾನ್‌ಗಳಿಗೆ ಡಿಸೇಲ್ ಹಾಕಲು ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net