

ರಾಯಚೂರು
ಇಂದು ನಮ್ಮೊಳಗಿನ ಅರಿವಿನ ಕೊರತೆಯಿಂದ ತಂತ್ರಜ್ಞಾನದ ಪ್ರಭಾವದಿಂದ ಅಪಾಯಕಾರಿ ಕಡೆಗೆ ವಾಲಿದ್ದೇವೆಂದು ಅದಿಕವಿ ಶ್ರೀ ಮಹರ್ಷಿ ವಾಲ್ಮಿಕಿ ವಿವಿಯ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
ನಗರದ ಮಾತೋಶ್ರೀ ತಪೋವನದ ಬಸವ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವಸೇವಾ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಮಸ್ವಾನುಭಾವ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇವತ್ತು ಜಾಗತಿಕ ಮಟ್ಟದಲ್ಲಿ ಮನುಷ್ಯನ ವಿಚಾರ ಅರಿಯಲು ಎಐ ತಂತ್ರಜ್ಞಾನಕ್ಕೆ ಅವಲಂಬನೆ ಹೆಚ್ಚಿದ್ದರಿಂದ ನಮ್ಮ ಬದುಕು ಅಪಾಯಕಾರಿಯತ್ತ ಜಾರಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಂತರಿಕವಾಗಿ ಶೋಧಿಸಿ ಕೊಳ್ಳುವುದು ಬಹಳ ಕಷ್ಟದ ಕೆಲಸ ಇನ್ನೊಬ್ಬರ ಬಗ್ಗೆ ಮಾತನಾಡುವುದೆ ಹೆಚ್ಚು. ನಮ್ಮೊಳಗೆ ನಾವು ಶೋಧಿಸಿಕೊಂಡಿದ್ದರೆ ಇಂದು ಜಗತ್ತಲ್ಲ್ಿ ನಡೆಯುತ್ತಿರುವ ಪ್ರಕ್ಷೋಬೆಗಳಿರುತ್ತಿರಲಿಲ್ಲ ಎಂದರು.
ಜಾಗತಿಕ ಮಟ್ಟದಲ್ಲಿ ತುಮಲು, ಆಶಾಂತಿ ದುರಾಸೆ, ಅಹಂಕಾರ,ಮತ್ತೊಬ್ಬರಿಗೆ ಹಿಂಸೆ ವಿಕೃತಿ ಹೆಚ್ಚಲು ನಮ್ಮೊಳಗಿನ ಅರಿವಿನ ಕೊರತೆ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಮಾತನಾಡಿ, ಬಿಎಡ್ ವಿದ್ಯಾರ್ಥಿಗಳಿಗೆ ಇರುವ ತತ್ವಶಾಸ್ತ್ರದ ಮನೋವಿಜ್ಞಾನ ಪರಿಚಾಯತ್ಮಕ ಕಾರ್ಯಕ್ರಮದ ಭಾಗವಾಗಿ ನಾಲ್ಕು ಜ್ಞಾನದ ಗೋಷ್ಠಿಗಳು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಂಡ್ಯದ ಆದಿಚಿಂಚನಗಿರಿ ವಿವಿಯ ಪ್ರಾಧ್ಯಾಪಕ ಡಾ.ಟಿ.ವಾಸುದೇವ ಮೂರ್ತಿ, ಸಾಹಿತಿಗಳಾದ ಬಿ.ಜಿ.ಹುಲಿ, ಅಯ್ಯಪ್ಪಯ್ಯ ಹುಡಾ, ಆಂಜನೇಯ ಜಾಲಿಬೆಂಚಿ, ವೆಂಕಟರಾವ್ ಕುಲಕರ್ಣಿ,ಕಸಾಪ ಜಿಲ್ಲಾ ಕೋಶಾಧ್ಯಕ್ಷ ನಾಗಪ್ಪ ಹೊರಪ್ಯಾಟಿ, ಕಾರ್ಯದರ್ಶಿ ಡಾ.ರೇಖಾ ಪಾಟೀಲ, ಸದಸ್ಯ ಡಾ. ಬಿ.ಎಂ.ವಿರೂಪಾಕ್ಷಿ , ರಾವುತರಾವ್ ಬರೂರ ಇದ್ದರು.