ಓದು, ಬರಹ, ಒಳಾಂಗಣ ಆಟ, ಪಕ್ಷಿ ವೀಕ್ಷಣೆ, ಕಂಪ್ಯೂಟರ್, ಕರೋಕೆ ಸಾಂಗ್ಸ್ ಕಲಿಕೆ, ಪಝಲ್ ರಚನೆ, ಸ್ವರಚಿತ ಕವನವಾಚನ, ಸರ್ಕಾರಿ ಕಚೇರಿಗಳ ಭೇಟಿ, ಮಕ್ಕಳ ಚಲನಚಿತ್ರ ವೀಕ್ಷಣೆ ಸೇರಿದಂತೆ ಮಕ್ಕಳಿಂದ ಸೃಜನಾತ್ಮಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಗ್ರಂಥಾಲಯ ಮೇಲ್ವಿಚಾರಕ ವೆಂಕಟೇಶ ಎಸ್.ಬಪ್ಪೂರು ಹಾಗೂ ಪಿಡಿಒ ನಾಗೇಶ್ ತಿಳಿಸಿದ್ದಾರೆ.