ಜ.18 ರಂದು ಸುಗಮ ಸಂಗೀತ ಕಾರ್ಯಾಗಾರ

ರಾಜಶೇಖರ ನುಲಿ
ರಾಜಶೇಖರ ನುಲಿ
Published on
ರಾಯಚೂರು ಬೆಂಗಳೂರಿನ ಸುರಾಗ ಸಂಗೀತ ಅಕಾಡೆಮಿ ಟ್ರಸ್ಟ್ ಹಾಗೂ ರಾಯಚೂರು ಗೆಳೆಯರ ಬಳಗದಿಂದ ನಗರದ ಓಂ ಸಾಯಿಧ್ಯಾನ ಮಂದಿರದಲ್ಲಿ ಜ.18 ರಂದು ಸುಗಮ ಸಂಗೀತ ಕಾರ್ಯಾಗಾರ ಹಾಗೂ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಲಾಗಿದೆಂದು ಟ್ರಸ್ಟ್‌ನ ಸಂಸ್ಥಾಪಕ ರಾಜಶೇಖರ ನುಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ತರಬೇತಿಯನ್ನು ಆಯೋಜನೆ ಮಾಡಲಾಗಿದೆ. ಸುಗಮ ಸಂಗೀತದೊಂದಿಗೆ ಹೊಸ ಹೊಸ ಗೀತೆಗಳನ್ನು ಹಾಡುವದನ್ನು ರೂಢಿಸಲಾಗುತ್ತದೆ.
ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ಅನೇಕ ಸಂಗೀತ ಕಾರ್ಯಕ್ರಮದೊಂದಿಗೆ ನಾಲ್ಕು ಅಲ್ಬಂಗಳನ್ನು ಹೊರತರಲಾಗಿದೆ. ಚಲನಚಿತ್ರ ಸಂಗೀತ ನಿರ್ದೇಶನದೊಂದಿಗೆ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿಯೂ ಕಾರ್ಯನಿರ್ವಹಿಸಿದ ಅನುಭವದೊಂದಿಗೆ ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ. ಆಸಕ್ತರು ಹೆಸರು ನೊಂದಾಯಿಸಿಕೊಂಡು ಶಿಬಿರದ ಸದುಪಯೋಗ ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹುಲಿಗೆಪ್ಪ ಜಗ್ಲಿ, ಚಂದ್ರಶೇಖರ, ಬಸವಲಿಂಗಪ್ಪ, ಈರಣ್ಣ, ನರಸಿಂಹಲು ಜೆಗ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net