ಸಿಂಧನೂರು ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ರಸಾಯನಶಾಸ್ತ್ರ ಉಪನ್ಯಾಸಕಿ ಡಾ.ಪುಷ್ಪಾ ಉದ್ಘಾಟಿಸಿದರು. ಐಕ್ಯೂಎಸಿ ಸಂಚಾಲಕ ಡಾ.ವೈಜನಾಥ, ಗ್ರಂಥಪಾಲಕ ಯಲ್ಲಪ್ಪ ಗೊನ್ವಾರ, ಕನ್ನಡ ಅಧ್ಯಯನ ವಿಭಾಗದ ಅಧ್ಯಾಪಕ ಡಾ.ಶಂಕರ ಗುರಿಕಾರ, ಪ್ರ್ರಾಧ್ಯಾಪಕಿ ಡಾ.ಪದ್ಮಶ್ರೀ, ಡಾ.ಗೀತಾ ಪಾಟೀಲ್ ಇತರರಿದ್ದರು.
ಸಿಂಧನೂರು:ಸಂಶೋಧನೆಯು ತಾಳ್ಮೆ, ನಿರಂತರ ಪರಿಶ್ರಮದೊಂದಿಗೆ ಅಧ್ಯಯನಶೀಲತೆ, ಅಂತರ ಶಿಸ್ತು ಬಯಸುತ್ತದೆ ಎಂದು ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಪದ್ಮಶ್ರೀ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಿಂದ ಸಂಶೋಧನಾ ವಿಧಿ-ವಿಧಾನಗಳು ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜ್ಞಾನ ಮತ್ತು ಸಾಹಿತ್ಯ ಭಿನ್ನವಾಗಿರುತ್ತವೆ. ಸತ್ಯದ ಮೂಲ ಆಕಾರಗಳನ್ನು ಇಟ್ಟುಕೊಂಡು ಅದರ ಮೇಲೆ ಬೆಳಕು ಚೆಲ್ಲಬೇಕು. ಪ್ರಾಥಮಿಕ ಮತ್ತು ಮಾಧ್ಯಮಿಕ ಆಕಾರ ಸಾಮಗ್ರಿಗಳಿಂದ ಪೂರಕ ಆಕಾರಗಳ ಮೂಲಕ ವಿಷಯ ವಿಶ್ಲೇಷಣೆ, ಅಡಿಟಿಪ್ಪಣಿ, ಅನುಬಂಧ ಹಂತಗಳಲ್ಲಿ ಮಹಾಪ್ರಬಂಧ ರಚಿಸಬಹುದು ಎಂದರು.
ರಸಾಯನಶಾಸ್ತ್ರ ಉಪನ್ಯಾಸಕಿ ಡಾ.ಪುಷ್ಪಾ ಮಾತನಾಡಿ, ಸಂಶೋಧನೆ ಎಂದರೆ ಸತ್ಯದ ಅನ್ವೇಷಣೆ ಹಾಗೂ ಹೊಸತನದ ಹುಡುಕುವಿಕೆಯಾಗಿದೆ ಎಂದರು.
ಐಕ್ಯೂಎಸಿ ಸಂಚಾಲಕ ಡಾ.ವೈಜನಾಥ, ಗ್ರಂಥಪಾಲಕ ಯಲ್ಲಪ್ಪ ಗೋನ್ವಾರ, ಸಂಶೋಧನ ಕ್ಷೇತ್ರ ಕಾರ್ಯ ಕುರಿತು ಡಾ.ಗೀತಾ ಪಾಟೀಲ್ ಮಾತನಾಡಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಜಾಜಿ ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಉಪನ್ಯಾಸಕ ಮುದ್ದಯ್ಯ ನಾಯಕ, ರಾಮಣ್ಣ ಹಿರೇಬೇರ‌್ಗಿ, ಡಾ.ಅರುಣಕುಮಾರ ಬೇರ‌್ಗಿ, ಡಾ.ಕನಕರಾಯ, ಡಾ.ನಾಗರಾಜ ದೊರೆ, ಬಸಪ್ಪ ಹುಣಸಿಗಿ, ಇತಿಹಾಸ ವಿಭಾಗ ಮುಖ್ಯಸ್ಥ ಸೈಯದ್ ಅಜಗರ್, ರಾಜ್ಯಶಾಸ್ತ್ರ ಉಪನ್ಯಾಸಕ ಹನುಮನಗೌಡ, ಡಾ.ಮರಿಲಿಂಗಪ್ಪ, ಡಾ.ಉಮೇಶ ಗುರಿಕಾರ್, ನಾರಾಯಣಪ್ಪ ಬೆಳಗುರ್ಕಿ ಇದ್ದರು.