ಶಿಶಿಕ್ಷು ಮೇಳದಲ್ಲಿ ಜೆಎಸ್‌ಡಬ್ಲುೃ ತೋರಣಗಲ್ಲು, ಹೋಂಡಾ ಕಂಪನಿ (ಬೆಂಗಳೂರು), ಇ2ಇ ಕನ್ಸಲ್ಟೆನ್ಸಿ (ರಾಯಚೂರು) ಸೇರಿದಂತೆ ವಿವಿಧ ಉದ್ಯಮಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮೇಳಕ್ಕೆ ಆಗಮಿಸಿದ ವಿವಿಧ ಕಂಪನಿಗಳ ಪ್ರತಿನಿಧಿಗಳು ವಿದ್ಯಾರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಮೇಳದಲ್ಲಿ ಸುಮಾರು 60 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರಗಳನ್ನು ನೀಡಲಾಯಿತು.