ಮಾದರಿಯಾಗಿದೆ ವಿದ್ಯಾರ್ಥಿಗಳ ಸಾಧನೆ

ಯಲಗಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬೆಳ್ಳಿ ಮಹೋತ್ಸವವನ್ನು ಶಾಸಕ ಮಾನಪ್ಪ ವಜ್ಜಲ್ ಉದ್ಘಾಟಿಸಿದರು. ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ಬಿಇಒ ಸುಜಾತಾ ಎಚ್., ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ ಇತರರಿದ್ದರು.
ಯಲಗಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬೆಳ್ಳಿ ಮಹೋತ್ಸವವನ್ನು ಶಾಸಕ ಮಾನಪ್ಪ ವಜ್ಜಲ್ ಉದ್ಘಾಟಿಸಿದರು. ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ಬಿಇಒ ಸುಜಾತಾ ಎಚ್., ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಮಾನಪ್ಪ ವಜ್ಜಲ್ ಹೇಳಿಕೆ
  • ಯಲಗಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ರಜತ ಸಂಭ್ರಮ
ಹಟ್ಟಿಚಿನ್ನದಗಣಿ: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ವಿದ್ಯಾರ್ಜನೆಗೆ ಅಗತ್ಯ ಸವಲತ್ತು ಒದಗಿಸಲು ಕೋರಿದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕ ಮಾನಪ್ಪ ವಜ್ಜಲ್ ಆರೋಪಿಸಿದರು.
ಸಮೀಪದ ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಶಾಲೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವು ಕೊರತೆಗಳ ಮಧ್ಯೆ ಯಲಗಟ್ಟಾ ಶಾಲೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆ ಇತರ ಶಾಲೆಗಳಿಗೆ ಮಾದರಿಯಾಗಿದೆ ಎಂದರು. 
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ತಂದೆ-ತಾಯಿಯೇ ಮೊದಲ ಗುರುಗಳು. ಶಿಕ್ಷಣ ಮೊಟಕುಗೊಳಿಸಿ ಮಕ್ಕಳ ಜೀವನ ಹಾಳು ಮಾಡಬೇಡಿ. ಮಕ್ಕಳ ಎದುರಿಗೆ ಮದ್ಯಪಾನ ಮಾಡಿದರೆ ಅಂತಹ ಕುಟುಂಬಗಳಲ್ಲಿ ಸಂಸ್ಕಾರ ಮಾಯವಾಗಿ ಸಂಸಾರಗಳ ಅವನತಿಯಾಗುತ್ತವೆ. ಶಾಲೆಯಲ್ಲಿ ಶಿಕ್ಷಕರು ಪರಿಣಾಮಕಾರಿ ಬೋಧನೆ ಮಾಡಬೇಕು. ಮಕ್ಕಳು ಪಾಠ ಪ್ರವಚನವನ್ನು ತದೇಕಚಿತ್ತದಿಂದ ಆಲಿಸಬೇಕು. 
ಶಿಕ್ಷಕರು ದಂಡಿಸಿದರೆ ಪಾಲಕರು ಶಾಲೆಗೆ ಬಂದು ಗಲಾಟೆ ಮಾಡಬಾರದು. ಯಲಗಟ್ಟಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಿತ ಹಲವರು ಉನ್ನತ ಹುದ್ದೆಗಳಲ್ಲಿರಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಯಲಗಟ್ಟಾದಲ್ಲಿ ಶಾಲೆ ಹಾಗೂ ವಸತಿ ನಿಲಯಕ್ಕೆ ಭೂಮಿ ದಾನವಾಗಿ ನೀಡುವ ಮೂಲಕ ಸಾವಿರಾರು ಮಕ್ಕಳ ವಿದ್ಯೆಗೆ ಹುಸೇನ್ ಸಾಬ್ ಹಾಗೂ ನರಸಣ್ಣ ನೆರವಾಗಿದ್ದಾರೆ ಎಂದರು. 
ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ಬಿಇಒ ಸುಜಾತಾ ಎಚ್., ಪ್ರಮುಖರಾದ ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ, ಪರಮೇಶ್ವರ ಯಾದವ್, ನಿಂಗಣ್ಣ ಸಾಹುಕಾರ್, ಅಂಬಮ್ಮ ಲಕ್ಷ್ಮಣ, ಅಣ್ಣರಾಯ್, ರಾಜು, ಮರಡಯ್ಯಸ್ವಾಮಿ, ಶಿವಶಂಕರ, ಬಸವರಾಜ ಇತರರಿದ್ದರು.
ಪೋಟೊ21ಹಟ್ಟಿಚಿನ್ನದಗಣಿ0304
ಯಲಗಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬೆಳ್ಳಿ ಮಹೋತ್ಸವವನ್ನು ಶಾಸಕ ಮಾನಪ್ಪ ವಜ್ಜಲ್ ಉದ್ಘಾಟಿಸಿದರು. ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ಬಿಇಒ ಸುಜಾತಾ ಎಚ್., ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net