ಲೇಬರ್ ಕೋಡ್ ವಿರುದ್ಧ ಹೋರಾಟ ಅಗತ್ಯ

ದೇವದುರ್ಗ ತಾಲೂಕು ಬಾಗೂರಿನಲ್ಲಿ ಖಾತ್ರಿ ಕೆಲಸದ ಸ್ಥಳದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ನಿಮಿತ್ತ  ಕೃಷಿ ಕೂಲಿಕಾರರ ಸಂಘಟನೆ ತಾಲೂಕು ಕಾರ್ಯದರ್ಶಿ ದೇವಮ್ಮ ಕೇಕ್ ಕತ್ತರಿಸಿದರು. ತಾಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ, ಶಿವಣ್ಣ, ಬಸವರಾಜ, ಶಿವು, ನಾಗರಾಜ ಇದ್ದರು.
ದೇವದುರ್ಗ ತಾಲೂಕು ಬಾಗೂರಿನಲ್ಲಿ ಖಾತ್ರಿ ಕೆಲಸದ ಸ್ಥಳದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ನಿಮಿತ್ತ ಕೃಷಿ ಕೂಲಿಕಾರರ ಸಂಘಟನೆ ತಾಲೂಕು ಕಾರ್ಯದರ್ಶಿ ದೇವಮ್ಮ ಕೇಕ್ ಕತ್ತರಿಸಿದರು. ತಾಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ, ಶಿವಣ್ಣ, ಬಸವರಾಜ, ಶಿವು, ನಾಗರಾಜ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಕೂಲಿಕಾರರ ಸಂಘಟನೆ ಜಿಲ್ಲಾ ಕಾರ್ಯದಶಿ ಸಂಗಮೇಶ ಅಭಿಮತ
  • ದೇವದುರ್ಗ ಬಾಗೂರು ಕಾರ್ಮಿಕರ ದಿನಾಚರಣೆ
ದೇವದುರ್ಗ: ಕಾರ್ಮಿಕರ ಹಕ್ಕುಗಳನ್ನು ಪಡೆಯಲು ನಡೆದ ಹೋರಾಟವೇ ಮೇ ಡೇ. ಅದುವೇ ಕಾರ್ಮಿಕರ ಚಾರಿತ್ರಿಕ ದಿನವಾಗಿದೆ ಎಂದು ಕೃಷಿ ಕೂಲಿಕಾರರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಮೂಲಿಮನಿ ಹೇಳಿದರು.
ತಾಲೂಕಿನ ಬಾಗೂರು ಗ್ರಾಮದಲ್ಲಿ ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಅಭಿವೃದ್ಧಿಗೆ ಕಾರ್ಮಿಕರೇ ದೊಡ್ಡ ಶಕ್ತಿಯಾಗಿದ್ದಾರೆ. ದೇಶದ ಮೊದಲ ಕಾರ್ಮಿಕ ಸಚಿವರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾರ್ಮಿಕರಿಗೆ ಅಗತ್ಯ ಸೌಕರ್ಯ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ಕಾರ್ಮಿಕ ಕಾಯ್ದೆ ಜಾರಿಗೆ ತಂದಿದ್ದು, ಅಸಂಖ್ಯಾತ ಕಾರ್ಮಿಕರು ಸೌಲಭ್ಯ ಪಡೆಯುತ್ತಿದ್ದಾರೆ.
ಆದರೆ, ಇಂದು ಆಳುವ ವರ್ಗ ಕಾರ್ಮಿಕರ ಹಕ್ಕುಗಳ ಮೇಲೆ ನೇರ ದಾಳಿ ನಡೆಸುತ್ತಿದೆ. ಮೇ 1 ಕಾರ್ಮಿಕರ ಹೋರಾಟದ ಇತಿಹಾಸವನ್ನು ಸ್ಮರಿಸುವ ದಿನ ಮಾತ್ರವಲ್ಲ, ಕಾರ್ಮಿಕರ ರಕ್ಷಿಸುವ ಸಂಕಲ್ಪದ ದಿನವಾಗಿದೆ. ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್‌ಗಳು ಕಾರ್ಮಿಕರ ಹಕ್ಕುಗಳಿಗೆ ದೊಡ್ಡ ಹೊಡೆತವಾಗಿದೆ. ಹಲವು ವರ್ಷಗಳ ಹೋರಾಟದಿಂದ ಕಾರ್ಮಿಕರು ಪಡೆದಿದ್ದ ಕಾನೂನುಬದ್ಧ ಹಕ್ಕುಗಳನ್ನು ಒಂದೇ ಸಲ ಕಡಿತಗೊಳಿಸುವ ಪ್ರಯತ್ನವೇ ಈ ಲೇಬರ್ ಕೋಡ್‌ಗಳು. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದರು. ಸಂಘಟನೆ ತಾಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ, ತಾಲೂಕು ಕಾರ್ಯದರ್ಶಿ ದೇವಮ್ಮ, ಗ್ರಾಮ ಘಟಕ ಅಧ್ಯಕ್ಷ ಶಿವಣ್ಣ, ಬಸವರಾಜ, ಶಿವು, ನಾಗರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net