ಬಿಡಾಡಿ ದನಗಳು ಗೋಶಾಲೆಗೆ ರವಾನೆ

ಸಿಂಧನೂರಿನಲ್ಲಿ ಬಿಡಾಡಿ ದನಗಳನ್ನು ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ನೇತೃತ್ವದಲ್ಲಿ ಗೋಶಾಲೆಗೆ ರವಾನಿಸಲಾಯಿತು.
ಸಿಂಧನೂರಿನಲ್ಲಿ ಬಿಡಾಡಿ ದನಗಳನ್ನು ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ನೇತೃತ್ವದಲ್ಲಿ ಗೋಶಾಲೆಗೆ ರವಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಾಹನ ಸವಾರರು, ಸಾರ್ವಜನಿಕರ ಓಡಾಟಕ್ಕೆ ತೊಂದರೆ
  • ಪೌರಾಯುಕ್ತ ಪಾಂಡುರಂಗ ಇಟಗಿ ನೇತೃತ್ವದಲ್ಲಿ ರವಾನೆ
ಸಿಂಧನೂರು: ನಗರ ವ್ಯಾಪ್ತಿಯಲ್ಲಿ ವಾಹನ ಸವಾರರು, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬಿಡಾಡಿ ದನಗಳನ್ನು ನಗರಸಭೆ ಸಿಬ್ಬಂದಿ ಮಂಗಳವಾರ ಗೋಶಾಲೆಗೆ ರವಾನಿಸಿತು.
ಪೌರಾಯುಕ್ತ ಪಾಂಡುರಂಗ ಇಟಗಿ ಮಾತನಾಡಿ, ಮುಖ್ಯ ರಸ್ತೆಯಲ್ಲಿಯೇ ಬಿಡಾಡಿ ದನಗಳು ಮಲಗುವುದು, ಹಗಲಿನಲ್ಲಿ ರಸ್ತೆ ಮಧ್ಯೆ ನಿಂತು ವಾಹನ ಸವಾರರಿಗೆ ತೊಂದರೆ ಕೊಡುವ ಬಗ್ಗೆ  ದೂರುಗಳು ಬಂದಿದ್ದವು. 
ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಾಯಾರ್ಆಚರಣೆ ನಡೆಸಿ, ಬಿಡಾಡಿ ದನಗಳನ್ನು ಗೋಶಾಲೆಗೆ ಕಳಿಸಲಾಗಿದೆ. ರಸ್ತೆಗೆ ಬಿಡಾಡಿ ದನಗಳನ್ನು ಬಿಟ್ಟರೆ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 
ಆರೋಗ್ಯ ನಿರೀಕ್ಷಕರಾದ ಕಿಶನ್ ರಾವ್, ವೆಂಕಟೇಶ ಹವಾಲ್ದಾರ್, ಗೌಡರ್ ಲಕ್ಷ್ಮೀಪತಿ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net