ಗೈರಾಣ ಭೂಮಿ ಒತ್ತುವರಿ ತಡೆದು ಶಾಲೆಗೆ ನೀಡಿ

ಅರಕೇರಾದಲ್ಲಿ ತಹಸಿಲ್ ಕಚೇರಿ ನೌಕರ ವೀರೇಂದ್ರಗೆ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಮಿತಿ ಮನವಿ ಸಲ್ಲಿಸಿದವು. ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಸಂತೋಷ ತ್ಯಾಪ್ಲಿ, ಡಿವೈಎಫ್‌ಐ ಗ್ರಾಮ ಘಟಕ ಅಧ್ಯಕ್ಷ ಆಂಜನೇಯ, ಕಾರ್ಯದರ್ಶಿ ಚಂದ್ರಶೇಖರ, ಉಪಾಧ್ಯಕ್ಷ ರವಿ, ಪ್ರಮುಖರಾದ ಸಂತೋಷ ತ್ಯಾಪ್ಲಿ, ಆಂಜನೇಯ, ಶಶಿಕುಮಾರ್, ಬಸವರಾಜ, ಹನುಮಂತ, ಆಂಜನೇಯ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಎಫ್‌ಐ-ಡಿವೈಎಫ್‌ಐ ಸಮಿತಿ ಆಗ್ರಹ
  • ಅರಕೇರಾ ಹಾಳಜಾಡಲದಿನ್ನಿ ತಹಸೀಲ್ದಾರ್‌ಗೆ ಮನವಿ
ಅರಕೇರಾ: ತಾಲೂಕಿನ ಹಾಳಜಾಡಲದಿನ್ನಿ ಗ್ರಾಮದಲ್ಲಿ ಗೈರಾಣ ಭೂಮಿ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಶಾಲೆಗೆ ಮಂಜೂರು ಮಾಡಲು ಒತ್ತಾಯಿಸಿ ಎಸ್‌ಎಫ್‌ಐ ತಾಲೂಕು ಘಟಕ ಮತ್ತು ಡಿವೈಎಫ್‌ಐನಿಂದ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ ಮಾತನಾಡಿ, ಹಾಳಜಾಡಲದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಹಳೆಯ ಮತ್ತು ಅಪಾಯಕಾರಿ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿವೆ. ಶಾಲೆಗೆ ಯಾವುದೇ ತಡೆಗೋಡೆ ಇಲ್ಲದಿರುವುದು ಮತ್ತು ನೇರವಾಗಿ ಮುಖ್ಯ ರಸ್ತೆಗೆ ಸಂಪರ್ಕ ಹೊಂದಿದ್ದು, ಮಕ್ಕಳಿಗೆ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ ಎಂದರು.
ಶಾಲೆ ಕಾರ್ಯನಿರ್ವಹಿಸುತ್ತಿರುವ ಜಾಗ ಖಾಸಗಿ ವ್ಯಕ್ತಿಗಳ ಸ್ವತ್ತಾಗಿದ್ದು, ಶಾಲೆಯ ಅಭಿವೃದ್ಧಿಗೆ ಅಗತ್ಯವಾದ ಜಾಗವನ್ನು ನೀಡಲು ಅವರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಶಾಲೆಯ ವಿಸ್ತರಣೆ ಮತ್ತು ಮೂಲಸೌಲಭ್ಯಗಳ ಅಭಿವೃದ್ಧಿಗೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಾಳಜಾಡಲದಿನ್ನಿ ಗ್ರಾಮದ ಸ.ನಂ. 4, 5, 7, 75ರಲ್ಲಿ ಇರುವ ಸರ್ಕಾರಿ ಗೈರಾಣು ಭೂಮಿಯನ್ನು ಶಾಲೆಗೆ ಮಂಜೂರು ಮಾಡಬೇಕು. ಇದರಿಂದ ಹೊಸ ಕಟ್ಟಡ, ತಡೆಗೋಡೆ, ಆಟದ ಮೈದಾನ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗಲಿದೆ ಎಂದು ಕೋರಿದರು.
ಪ್ರಮುಖರಾದ ಮೌನೇಶ, ಸುರೇಶ್, ಗೋಪಾಲ, ನಾಗರಾಜ, ರಂಗಯ್ಯ, ರಾಮಕೃಷ್ಣ, ಶರಣಬಸವ, ಶಿವಕುಮಾರ್, ಸಿದ್ಧಲಿಂಗ, ರಾಮಸ್ವಾಮಿ, ಚನ್ನಬಸವ, ಸುರೇಶ್ ಹೂಗಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net