ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಲವಾರು ಕ್ರಮಗಳನ್ನು ಕೈಗೊಂಡರೂ ಸಹ ಪ್ರಕರಣಗಳು ವರದಿಯಾಗುತ್ತಿವೆ. ಮುಖ್ಯವಾಗಿ ಬಾಲ್ಯವಿವಾಹದಿಂದ ಇಡೀ ಸಾಮಾಜಿಕ ಜೀವನ ಅಸ್ತವ್ಯಸ್ತವಾಗುತ್ತದೆ. ಬಡತನ, ಅನಕ್ಷರತೆ ಸೇರಿ ವಿವಿಧ ಕಾರಣಗಳಿಂದ ಹದಿಹರೆಯದಲ್ಲೇ ಮಕ್ಕಳು ಮದುವೆಯ ಬಂಧನಕ್ಕೆ ಒಳಗಾಗಿ, ದೈಹಿಕ ಮತ್ತು ಮಾನಸಿಕವಾಗಿ ಕುಗ್ಗುತ್ತಾರೆ. ಬಾಲ್ಯವಸ್ಥೆಯಲ್ಲಿಯೇ ಗರ್ಭಿಣಿಯಾಗುವುದರಿಂದ ಅವಧಿ ಪೂರ್ವ ಪ್ರಸವ, ಅಪೌಷ್ಠಿಕ ಮಕ್ಕಳ ಜನನ, ರಕ್ತ ಹೀನತೆ ಸೇರಿ ವಿವಿಧ ಸಮಸ್ಯೆಗಳಿಂದ ಬಳಲುತ್ತಾರೆ. ಇವುಗಳು ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ ಎಂದರು.