ತಂಬಾಕು ವಸ್ತುಗಳಿಂದ ದೂರವಿರಿ

 ಸಿಂಧನೂರಲ್ಲಿ ಹಮ್ಮಿಕೊಂಡಿದ್ದ ತಂಬಾಕು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಆಯುಷ್ ವೈದ್ಯ ಮಂಜುನಾಥ ಅಣಗೌಡ್ರ, ಜಿಲ್ಲಾ ಆರೋಗ್ಯ ನಿರೀಕ್ಷಕ ರಂಗನಾಥ, ಎನ್‌ಸಿಡಿ ಡಾ.ಸುರೇಶ ಪಾಟೀಲ್, ಸಂಗನಗೌಡ ಇತರರಿದ್ದರು.
ಸಿಂಧನೂರಲ್ಲಿ ಹಮ್ಮಿಕೊಂಡಿದ್ದ ತಂಬಾಕು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಆಯುಷ್ ವೈದ್ಯ ಮಂಜುನಾಥ ಅಣಗೌಡ್ರ, ಜಿಲ್ಲಾ ಆರೋಗ್ಯ ನಿರೀಕ್ಷಕ ರಂಗನಾಥ, ಎನ್‌ಸಿಡಿ ಡಾ.ಸುರೇಶ ಪಾಟೀಲ್, ಸಂಗನಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಯುಷ್ ವೈದ್ಯ ಮಂಜುನಾಥ ಅಣಗೌಡ್ರ ಸಲಹೆ
ಸಿಂಧನೂರು: ತಂಬಾಕುಮುಕ್ತ ಸಮಾಜ ನಿರ್ಮಾಣ ಮಾಡುವ ಹೊಣೆ ಗಾರಿಕೆ ಎಲ್ಲರ ಮೇಲಿದೆ ಎಂದು ಆಯುಷ್ ವೈದ್ಯ ಮಂಜು ನಾಥ ಅಣಗೌಡ್ರ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಸಿಂಧನೂರಿನ ತಂಬಾಕು ನಿಯಂತ್ರಣ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ವಜನಿಕರಲ್ಲಿ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ಉಂಟಾಗುವ ಭೀಕರ ಆರೋಗ್ಯ ಸಮಸ್ಯೆಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಂಬಾಕಿನಿಂದ ಕ್ಯಾನ್ಸರ್, ಹೃದಯರೋಗ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದರು.
ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಕ ರಂಗನಾಥ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಶಾಲಾ-ಕಾಲೇಜುಗಳ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಕಡ್ಡಾಯ ನಿಷೇಧಿಸಲಾಗಿದೆ ಎಂದರು.
ಎನ್‌ಸಿಡಿ ಡಾ.ಸುರೇಶ ಪಾಟೀಲ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂಗನಗೌಡ, ವಿಬಿಡಿಟಿಎಸ್ ತಾಲೂಕು ಮೇಲ್ವಿಚಾರಕ ಎಫ್.ಎ.ಹಣಗಿ, ಕ್ಷಯ ರೋಗದ ಮೇಲ್ವಿಚಾರಕ ಯಮನೂರ, ಎನ್‌ಸಿಡಿ ಮುತ್ತಮ್ಮ, ಗಾಯತ್ರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net