ರಾಜಕೀಯದ ಪ್ರಮುಖರ ಒತ್ತಡಕ್ಕೆ ಮಣಿದು ಅಲೆಮಾರಿಗಳ ಮೀಸಲು ಕಸಿದು ಕೊಂಡು ಹಂಚಿಕೆ ಮಾಡಲಾಗಿದೆ. ನ್ಯಾ.ನಾಗಮೋಹನ ದಾಸ್ ಆಯೋಗ ಮಾದಿಗರಿಗೆ 6 ಛಲವಾದಿ ಸಂಬಂಧಿತ ಜಾತಿಗಳಿಗೆ 5, ಬೋವಿ,ಲಂಬಾಣಿ ಸೇರಿ ಇತರೆರಿಗೆ 4 ಹಾಗೂ ಅಲೆಮಾರಿಗಳಿಗೆ 1 ಅನುಪಾತದಲ್ಲಿ ಮೀಸಲು ಹಂಚಿಕೆ ಮಾಡಿದ್ದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಮಾದಿಗರಿಗೆ, ಛಲವಾದಿ ಸಮೂದಾಯಕ್ಕೆ ತಲಾ ಆರು ಮೀಸಲು ನಿಗಧಿ ಮಾಡಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಅನ್ವಯಿಸಿರುವದಾಗಿ ಹೇಳುವ ಸರ್ಕಾರ ಬಡ್ತಿಯಲ್ಲಿ ಮೀಸಲು ಜಾರಿಗೆ ಅಧಿಕೃತ ಆದೇಶ ಹೊರಡಿಸಿದೆ ಮಾದಿಗ ಸಮಾಜಕ್ಕೆ ವ್ಯವಸ್ಥಿತವಾಗಿ ಮೀಸಲು ತಪ್ಪಿಸುವಹುನ್ನಾರ ನಡೆಸಿದೆಂದು ಆರೋಪಿಸಿದರು.