ಶಾಲಾ ಕಾಲೇಜು ಹಾಸ್ಟೆಲ್ ಆರಂಭ ಮಾಡಿ

ಜಾಲಹಳ್ಳಿಯಲ್ಲಿ ಮಂಗಳವಾರ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಮಹಾಲಿಂಗ ದೊಡ್ಡಮನಿ, ಶಬ್ಬೀರ್, ಸಂತೋಷ್ ತ್ಯಾಪ್ಲಿ, ಅಭಿಷೇಕ್, ರಿಯಾಜ್ ಆರ್ಥಿ, ರಾಜು ನಾಯಕ, ಮೌನೇಶ,ಮುಕ್ತಂ ಪಾಷಾ ಇತರರಿದ್ದರು.
ಜಾಲಹಳ್ಳಿಯಲ್ಲಿ ಮಂಗಳವಾರ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಮಹಾಲಿಂಗ ದೊಡ್ಡಮನಿ, ಶಬ್ಬೀರ್, ಸಂತೋಷ್ ತ್ಯಾಪ್ಲಿ, ಅಭಿಷೇಕ್, ರಿಯಾಜ್ ಆರ್ಥಿ, ರಾಜು ನಾಯಕ, ಮೌನೇಶ,ಮುಕ್ತಂ ಪಾಷಾ ಇತರರಿದ್ದರು.
Published on
ದೇವದುರ್ಗ: ಶಾಲಾ ಕಾಲೇಜು ಶುರುವಾಗಿದ್ದು, ಎಲ್ಲ ಇಲಾಖೆ ಹಾಸ್ಟೆಲ್ ಆರಂಭಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಜಾಲಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಶಾಲಾ ಕಾಲೇಜುಗಳಲ್ಲಿ ತರಗತಿಗಳು ಪ್ರಾರಂಭವಾಗಿದ್ದರೂ, ಹಾಸ್ಟೆಲ್‌ಗಳನ್ನು ತೆರೆಯದ ಕಾರಣ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಆಯ್ಕೆಪಟ್ಟಿ ಪ್ರಕಟವಾಗುವ ನಿರೀಕ್ಷೆಯಿಂದ ಪ್ರತಿದಿನ ದೂರದ ಗ್ರಾಮಗಳಿಂದ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಇದರಿಂದ ಖರ್ಚುವೆಚ್ಚ ಹೆಚ್ಚಾಗಲಿದೆ. ಅಲ್ಲದೆ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎಲ್ಲ ಇಲಾಖೆ ಹಾಸ್ಟೆಲ್‌ಗಳನ್ನು ಆರಂಭಿಸಬೇಕು. ಅರ್ಜಿ ಸಲ್ಲಿಸಿದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ವ್ಯವಸ್ಥೆ ಕಲ್ಪಿಸಬೇಕು. ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಕಂಪ್ಯೂಟರ್ ಲ್ಯಾಬ್ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಕೈಬಿಟ್ಟು ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಹೆಚ್ಚಿಸಬೇಕು. ಜಾಲಹಳ್ಳಿಯಲ್ಲಿ ಮಹಿಳಾ ವಸತಿ ನಿಲಯ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮಹಾಲಿಂಗ ದೊಡ್ಡಮನಿ, ಶಬ್ಬೀರ್, ಸಂತೋಷ್ ತ್ಯಾಪ್ಲಿ, ಅಭಿಷೇಕ್, ರಿಯಾಜ್ ಆರ್ಥಿ, ರಾಜು ನಾಯಕ, ಮೌನೇಶ, ಗ್ರಾಪಂ ಸದಸ್ಯ ಮುಕ್ತಂ ಪಾಷಾ, ಬಸವರಾಜ ವಂದಲಿ, ಹನುಮಂತ ಮಡಿವಾಳ, ರಾಮಣ್ಣ, ಮೌನೇಶ ಚಪ್ಪಳಿಕಿ, ಬಾಲು ಗೋಸಲ್, ಅಮೀರ್ ಪಾಟೀಲ್, ರಿಯಾಜ್ ಖುರ್ಷಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net