ಉಟಕನೂರು ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಇಎಫ್‌ಎಂಎಸ್ ವೇತನ ಪಾವತಿ ಬಾಕಿ ಇದ್ದು, ಉಟಕನೂರು ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ಆ ಗ್ರಾಪಂಯ ಎಲ್ಲ ಸಿಬ್ಬಂದಿ ವೇತನ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಮೂರು ದಿನಗಳೊಳಗಾಗಿ ಸಿಬ್ಬಂದಿ ವೇತನವನ್ನು ಪಾವತಿಸಬೇಕು. ವಿಳಂಬವಾದಲ್ಲಿ ಗ್ರಾಪಂ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.