ಎಸ್ಆರ್ ಐ ತಾಂತ್ರಿಕ ದೋಷ ಸರಿಪಡಿಸಿ

ಅಕ್ಬರ್ ಹುಸೇನ್
ಅಕ್ಬರ್ ಹುಸೇನ್
Published on

ರಾಯಚೂರು ವಿಶೇಷ ಮತದಾರರ ಪರಿಷ್ಕರಣೆಯಲ್ಲಿ ಅನೇಕ ಗೊಂದಲ, ತಾಂತ್ರಿಕ ಸಮಸ್ಯೆಗಳಿದ್ದು ಕೂಡಲೇ ಜಿಲ್ಲಾಡಳಿತ ಪರಿಹಾರ ಒದಗಿಸಬೇಕು. ಅರ್ಹ ಮತದಾರರು ಪಟ್ಟಿಯಿಂದ ವಂಚಿತವಾಗದಂತೆ ಎಚ್ಚರವಹಿಸಬೇಕೆಂದು ಎಸ್‌ಡಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಕ್ಬರ್ ಹುಸೇನ್ ನಾಗುಂಡಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಮುಂದುವರೆದಿದ್ದು, ಅನೇಕ ಮತದಾರರು ಮತದಾರರಪಟ್ಟಿಯಿಂದ ವಂಚನೆಯಾಗುವ ಆತಂಕ ಮನೆ ಮಾಡಿದೆ. ಬಿಎಲ್ ಓಗಳು ಸಹ ಸರಿಯಾಗಿ ಮಾಹಿತಿಯಿಲ್ಲದೇ ತಪ್ಪಾಗಿ ಅರ್ಜಿಗಳನ್ನು ಪಡೆಯುತ್ತಿದ್ದಾರೆ.

2002 ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ತಪ್ಪಾಗಿ ಹೆಸರುಗಳು ಸಾಪ್ಟವೇರನಲ್ಲಿ ದಾಖಲಾಗುತ್ತಿವೆ .ಹೆಸರು ತಪ್ಪಾದರೆ ಮತದಾನ ಹಕ್ಕೇ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಜಿಲ್ಲಾಡಳಿತ ಗಣತಿ ಅರ್ಜಿಗಳನ್ನು ನೀಡುತ್ತಿರುವದನ್ನು ಮಾತ್ರ ಹೇಳುತ್ತಿದೆ. ಆದರೆ ಸರಿಯಾದ ಅರ್ಜಿಗಳ ಭರ್ತಿಕುರಿತು ಗಮನಹರಿಸುತ್ತಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳು, ತಹಸೀಲ್ದಾರಿಗೆದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎಸ್‌ಐಆರ್ ಅಂತ್ಯಗೊಳ್ಳದರೊಳಗೆ ಸಮಸ್ಯೆ ಪರಿಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಮತೀನ್ ಅನ್ಸಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net