ಶ್ರೀ ರಾಮಲಿಂಗೇಶ್ವರ ಜಾತ್ರೋತ್ಸವ ಅದ್ದೂರಿ

ಮುದಗಲ್‌ನಲ್ಲಿ ರಾಮಲಿಂಗೇಶ್ವರ ಜಾತ್ರೆ ನಿಮಿತ್ತ ಕಲಶ ಮೆರವಣಿಗೆ ಜರುಗಿತು. ಪ್ರಮುಖರಾದ ರಜನಿಕಾಂತ ಶೆಟ್ಟಿ, ಮಹೇಶ ವಸ್ತ್ರದ್, ರಾಜು ಮಾಲಿಪಾಟೀಲ್, ಶಂಕರಗೌಡ ಕಿಡದೂರು, ಎಲ್.ಟಿ.ನಾಯ್ಕ, ಶರಣಪ್ಪ ಕುಂಬಾರ, ಬಾಬು ಉಪ್ಪಾರ ಇದ್ದರು.
ಮುದಗಲ್‌ನಲ್ಲಿ ರಾಮಲಿಂಗೇಶ್ವರ ಜಾತ್ರೆ ನಿಮಿತ್ತ ಕಲಶ ಮೆರವಣಿಗೆ ಜರುಗಿತು. ಪ್ರಮುಖರಾದ ರಜನಿಕಾಂತ ಶೆಟ್ಟಿ, ಮಹೇಶ ವಸ್ತ್ರದ್, ರಾಜು ಮಾಲಿಪಾಟೀಲ್, ಶಂಕರಗೌಡ ಕಿಡದೂರು, ಎಲ್.ಟಿ.ನಾಯ್ಕ, ಶರಣಪ್ಪ ಕುಂಬಾರ, ಬಾಬು ಉಪ್ಪಾರ ಇದ್ದರು.
Published on
ಮುದಗಲ್: ಪಟ್ಟಣದ ರಾಮಲಿಂಗೇಶ್ವರ ಕಾಲನಿಯಲ್ಲಿ ಭಾನುವಾರ ಶ್ರೀ ರಾಮಲಿಂಗೇಶ್ವರ ಜಾತ್ರೋತ್ಸವ ಶ್ರದ್ಧಾ-ಭಕ್ತಿಯಿಂದ  ಜರುಗಿತು.
ಬೆಳಗ್ಗೆ ರಾಮಲಿಂಗೇಶ್ವರ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕ ರೇಣುಕಾಸ್ವಾಮಿ ಹಿರೇಮಠ ನೇತೃತ್ವದಲ್ಲಿ ನೆರವೇರಿಸಲಾಯಿತು. 
ಶಿವನಮೂರ್ತಿಗೆ ನೂತನ ಕಂಚಿನ ಕವಚ, ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.  ಗಂಗಾಸ್ಥಳದಿಂದ ಶಂಕ್ರಯ್ಯಸ್ವಾಮಿ ನಡುವಿನಮಠ ಕಳಸ ಹೊತ್ತು ತಂದರು. ಮಹಿಳೆಯರ  ಕಳಸ-ಕನ್ನಡಿ ಹಾಗೂ ಹಲವು ವಾದ್ಯಮೇಳ ಜತೆಗೆ ಮೆರವಣಿಗೆ ನಡೆಯಿತು.
 ನಂತರ ಮಧ್ಯಾಹ್ನ ಗೋಪುರಕ್ಕೆ ಕಲಶಾರೋಹಣ, ಮಹಾಪ್ರಸಾದ ಕಾರ್ಯಕ್ರಮ ನಡೆದವು. ಮುಖಂಡರಾದ ಅಶೋಕಗೌಡ ಪಾಟೀಲ್, ನಾಗಲಾಪುರ ವಿಎಸ್‌ಎಸ್‌ನ ಶರಣಬಸವರಾಜ ಪಾಟೀಲ್ ವ್ಯಾಕರನಾಳ, ಗಣಿ ಉದ್ಯಮಿ ರಾಜು ದೊಡ್ಡನಗೌಡ ಪಾಟೀಲ್ ಲೆಕ್ಕಿಹಾಳ, ಡಾ.ಮಂಜುನಾಥ ಪಿಕಳಿಹಾಳ, ಡಾ.ಸಂಜೀವ ಭರಮಸಾಗರ, ಶಂಕರಗೌಡ ಕಿಡದೂರು, ಕೇಶವರೆಡ್ಡಿ ಯರದಿಹಾಳ, ಬ್ರಹ್ಮರೆಡ್ಡಿ, ಬಸವರಾಜ ಲೆಕ್ಕಿಹಾಳ, ನಾಗರಾಜ ಸರಗಣಾಚಾರಿ ವಕೀಲ,  ವೀರೇಶಗೌಡ ಅಕ್ಕಿ, ಪ್ರಕಾಶಸೇಠ್, ಚಂದ್ರಶೇಖರ ಪಾಟೀಲ್, ಬಾಬು ಉಪ್ಪಾರ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net