ಶ್ರೀರಾಮಲಿಂಗ ಚೌಡೇಶ್ವರಿ ಕುಂಭಮೇಳ

ದೇವದುರ್ಗದಲ್ಲಿ ಶನಿವಾರ ಶ್ರೀರಾಮಲಿಂಗ ಚೌಡೇಶ್ವರಿ ಮೂರ್ತಿ ಮೆರವಣಿಗೆಯಲ್ಲಿ ಮಹಿಳೆಯರು ಕುಂಭಕಳಸದೊಂದಿಗೆ ಭಾಗವಹಿಸಿದ್ದರು.
ದೇವದುರ್ಗದಲ್ಲಿ ಶನಿವಾರ ಶ್ರೀರಾಮಲಿಂಗ ಚೌಡೇಶ್ವರಿ ಮೂರ್ತಿ ಮೆರವಣಿಗೆಯಲ್ಲಿ ಮಹಿಳೆಯರು ಕುಂಭಕಳಸದೊಂದಿಗೆ ಭಾಗವಹಿಸಿದ್ದರು.
Published on
ದೇವದುರ್ಗ: ಬನದಹುಣ್ಣಿಮೆ ನಿಮಿತ್ತ ಪಟ್ಟಣದ ಅಬ್ಬು ಮೊಹಲ್ಲಾ ಏರಿಯಾದಲ್ಲಿನ ಶ್ರೀರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಹಾಗೂ ಕುಂಭಮೇಳ ಶ್ರದ್ಧಾಭಕ್ತಿಯಿಂದ ಜರುಗಿತು.
ಬೆಳಗ್ಗೆ 6ಕ್ಕೆ ಕೃಷ್ಣಾ ನದಿಗೆ ತೆರಳಿ ಗಂಗೆ ಪೂಜೆ ಮಾಡಿ ನದಿಯ ನೀರು ತಂದು ದೇವಿಗೆ ಜಲಾಭಿಷೇಕ ಮಾಡಲಾಯಿತು. ನಂತರ 7ಗಂಟೆಯಿಂದ ವಿವಿಧ ರೀತಿಯ ಪೂಜೆಗಳು ಜರುಗಿದವು. ತದನಂತರ ಶ್ರೀರಾಮಲಿಂಗ ದೇವರು ಹಾಗೂ ಚೌಡೇಶ್ವರಿ ತಾಯಿ ಮೂರ್ತಿ ಹಾಗೂ ಭಾವಚಿತ್ರ ಮೆರವಣಿಗೆ ನಡೆಯಿತು. 
ಮಹಿಳೆಯರ ಕುಂಭ ಕಳಸ, ಬಾಜಾಭಜಂತ್ರಿ ತಂಡಗಳು ಭಾಗವಹಿಸಿದ್ದವು. ಗೋಸಿ ಮಠಕ್ಕೆ ತೆರಳಿ ಅಲ್ಲಿಂದ ಕುಂಭಮೇಳದೊಂದಿಗೆ ದೇವಸ್ಥಾನಕ್ಕೆ ಮರಳಲಾಯಿತು. 
ತದನಂತರ 108 ನಾಮಾವಳಿ ಘೋಷಣೆಗಳೊಂದಿಗೆ ಬಿಲ್ವಪತ್ರಿ ಪೂಜೆ, ಹೂವಿನ ಅಲಂಕಾರ, ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲಿನ ಹಳ್ಳಿಗಳ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net