ನಾಯಕತ್ವ ಗುಣಗಳ ಬೆಳವಣಿಗೆಗೆ ಕ್ರೀಡೆ ಪೂರಕ

ಮುದಗಲ್‌ನ ಕನ್ನಾಪೂರಹಟ್ಟಿಯ ಪಿಎಂಶ್ರೀ ಜವಾಹರ ನವೋದಯ ಮಹಾವಿದ್ಯಾಲಯದಲ್ಲಿ 37ನೇ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರ ಕ್ರೀಡಾಜ್ಯೋತಿ ಸ್ವೀಕರಿಸಿ ಚಾಲನೆ ನೀಡಿದರು. ಪ್ರಾಚಾರ್ಯ ಮುನೇಂದ್ರಕುಮಾರ್, ದೈಹಿಕ ಶಿಕ್ಷಕರಾದ ಚಂದ್ರಶೇಖರ್, ಎಸ್.ಎನ್.ಅಕ್ಕಿ, ವಿನಯಕುಮಾರ್ ಹಾಗೂ ಇತರರಿದ್ದರು.
ಮುದಗಲ್‌ನ ಕನ್ನಾಪೂರಹಟ್ಟಿಯ ಪಿಎಂಶ್ರೀ ಜವಾಹರ ನವೋದಯ ಮಹಾವಿದ್ಯಾಲಯದಲ್ಲಿ 37ನೇ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರ ಕ್ರೀಡಾಜ್ಯೋತಿ ಸ್ವೀಕರಿಸಿ ಚಾಲನೆ ನೀಡಿದರು. ಪ್ರಾಚಾರ್ಯ ಮುನೇಂದ್ರಕುಮಾರ್, ದೈಹಿಕ ಶಿಕ್ಷಕರಾದ ಚಂದ್ರಶೇಖರ್, ಎಸ್.ಎನ್.ಅಕ್ಕಿ, ವಿನಯಕುಮಾರ್ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರ ಅಭಿಮತ
  • ಮುದಗಲ್ ನವೋದಯ ಮಹಾವಿದ್ಯಾಲಯದಲ್ಲಿ ಬಾಲ್ ಗೇಮ್ಸ್
ಮುದಗಲ್: ಪ್ರತಿಯೊಬ್ಬ ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರ ಅಭಿಪ್ರಾಯಪಟ್ಟರು.
ಕನ್ನಾಪೂರಹಟ್ಟಿಯ ಪಿಎಂಶ್ರೀ ಜವಾಹರ ನವೋದಯ ಮಹಾವಿದ್ಯಾಲಯದಲ್ಲಿ ಆರಂಭಗೊಂಡ 37ನೇ ಕ್ಲಸ್ಟರ್ ಮಟ್ಟದ ಬಾಲ್ ಗೇಮ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯನ್ನು ಮನದಲ್ಲಿರಿಸಿ ಸಹೋದರತೆ ಹಾಗೂ ಸ್ಪರ್ಧಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕು. ಕ್ರೀಡಾಕೂಟದಲ್ಲಿ ನಿರ್ಣಾಯಕರ ನಿರ್ಣಯಕ್ಕೆ ಬಧ್ಧರಾಗಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸಮತೋಲಿತವಾಗಿರುತ್ತವೆ. ನಾಯಕತ್ವ ಗುಣಗಳ ಬೆಳವಣಿಗೆಗೆ ಈ ಕ್ರೀಡೆಗಳು ಪೂರಕವಾಗಲಿದ್ದು, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದರು.
ಪ್ರಾಚಾರ್ಯ ಮುನೇಂದ್ರಕುಮಾರ್ ಮಾತನಾಡಿ, ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವಿಜಯಪುರ, ಕಲಬುರ್ಗಿ 1 ಮತ್ತು 2, ಬಾಗಕೋಟೆ, ಬೀದರ್, ಗದಗ, ಕೊಪ್ಪಳ, ಸೇರಿದಂತೆ 9ಕ್ಕೂ ಹೆಚ್ಚು ನವೋದಯ ವಿದ್ಯಾಲಯದ ಮಕ್ಕಳು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದು, ಮಕ್ಕಳು ಉತ್ತಮ ಪ್ರದರ್ಶನ ನೀಡುವಂತೆ ಪ್ರೇರಣೆ ನೀಡಿದರು.
ನವೋದಯ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಂಘಟನೆಯಿಂದ ಉಚಿತವಾಗಿ ಟೀಶರ್ಟ್‌ವಿತರಿಸಲಾಯಿತು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ, ಚಂದ್ರಶೇಖರ್, ನಿವೃತ್ತ ದೈಹಿಕ ಶಿಕ್ಷಕ ಎಸ್.ಎನ್.ಅಕ್ಕಿ, ಹಳೇ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ವಿನಯ್ ಕುಮಾರ್, ರಾಹುಲ್, ಉಪನ್ಯಾಸಕರಾದ ಅಂಜಲಿ, ನರೇಂದ್ರ, ಶ್ರೀಧರ್ ಗುಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net