_1771002806002.webp?w=480&auto=format%2Ccompress&fit=max)
_1771002806002.webp?w=480&auto=format%2Ccompress&fit=max)
ರಾಯಚೂರು
ಕ್ಯಾನ್ಸರ ರೋಗಕ್ಕೆ ಚಿಕಿತ್ಸೆ ಮತ್ತು ಗುಣಮಟ್ಟದ ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ಬೆಂಗಳೂರಿನ ಯಲಹಂಕ ಮಣಿಪಾಲ್ ಆಸ್ಪತ್ರೆಗೆ ಹೊಸದೊಂದು ಆಸ್ಪತ್ರೆ ಸೇವೆ ಒದಗಿಸಲು ಸಿದ್ಧವಾಗಿದೆಂದು ಆಸ್ಪತ್ರೆಯ ಸಲಹೆಗಾರ ಡಾ.ವಿಕ್ರಮ ಮಯ್ಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ಎಲೆಕ್ಟ್ರಾ ಇವೋ ಡಿಜಿಟಲ್ ಲೀನಿಯರ್ ಅಕ್ಸಿಲೇಟರ್ ಯಂತ್ರೋಪಕರಣವನ್ನು ಅಳವಡಿಸಲಾಗಿದೆ. ಕೃತಕ ಬುದ್ದಿಮತ್ತೆ (ಎಐ) ಮೂಲಕ ಐದು ವಿಶೇಷ ಚಿಕಿತ್ಸೆ ಒದಗಿಸುವ ಮೂಲಕ ನಿಖರ ಹಾಗೂ ಗುಣಮಟ್ಟ ಸೇವೆ ರೋಗಿಗೆ ತಲುಪಿಸಲಾಗುತ್ತದೆ. ಕ್ಯಾನ್ಸರ್ ಪೀಡಿತ ಅಂಗಗಳಿಗೆ ಹಾನಿಯಾಗದಂತೆ ವೈದ್ಯರ ತಂಡವಾಗಿ ಕಾರ್ಯನಿರ್ವಹಿಸಿ ಗುಣಮಟ್ಟದ ಸೇವೆ ಒದಗಿಸಲಿದೆ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಖಿಮೋ ಥೆರಪಿಯಿಂದ ಆಗುವ ದೇಹದ ಹಾನಿಯನ್ನು ಠಿ ತಡೆಯಲಾಗುತ್ತದೆ ಎಂದರು.
ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಡಾ.ಅರನ್ ಫರ್ನಾಂಡಿಸ್ ಮಾತನಾಡಿ, ಜನರಲ್ಲಿ ಕ್ಯಾನ್ಸರ್ ರೋಗದ ಕುರಿತು ತಪ್ಪು ತಿಳುವಳಿಕೆ, ಜಾಗೃತಿಯ ಕೊರತೆಯಿದೆ.
ನಿರಂತರವಾಗಿ ಪರೀಕ್ಷೆಗಳಿಗೆ ಒಳಗಾದರೆ ಮಹಿಳೆ ಮತ್ತು ಪುರಷರಲ್ಲಿ ಕ್ಯಾನ್ಸರ್ ನಿಯಂತ್ರಣ ಸಾಧ್ಯವಿದೆ. ಸುಧಾರಿತ ತಂತ್ರಜ್ಞಾನ ಮತತ್ತು ಮಾನವೀಯ ಕಾಳಜಿಯೊಂದಿಗೆ ಯಲಹಂಕ ಆಸ್ಪತ್ರೆ ಕ್ಯಾನ್ಸರ್ ಪೀಡಿತರಿಗೆ ಗುಣಾತ್ಮಕ ಚಿಕಿತ್ಸೆ ಒದಗಿಸಲು ರೋಬೋಟಿಕ್ ಅಂಕೋ ಸರ್ಜರಿಗಳನ್ನು ನಿಖರತೆಯೊಂದಿಗೆ ನಿರ್ವಹಿಸಲಿದೆ. ಈ ಮೊದಲು ಕ್ಯಾನ್ಸರ್‌ಗೆ ನೀಡಲಾಗುತ್ತಿದ್ದ ಶಸ್ತ್ರ ಚಿಕಿತ್ಸಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳಾಗಿದ್ದು ಹೊಸ ಹೊಸ ತಂತ್ರಜ್ಞಾನ, ಆವಿಷ್ಕರಗಳನ್ನು ಬಳಸಿ ಕಡಿಮೆ ಸಮಯದಲ್ಲಿ ಗುಣಮುಖವಾಗುವ ಅವಕಾಶಗಳನ್ನು ತೆರೆದಿದೆ ಎಂದರು.