ಮಹಾಶಿವರಾತ್ರಿ ನಿಮಿತ್ತ ಫೆ.14 ರಿಂದ 16ವರೆಗೆ ವಿಶೇಷ ಕಾರ್ಯಕ್ರಮ

ಮಹಾಶಿವರಾತ್ರಿ ನಿಮಿತ್ತ ಫೆ.14 ರಿಂದ 16ವರೆಗೆ ವಿಶೇಷ ಕಾರ್ಯಕ್ರಮ
ಮಹಾಶಿವರಾತ್ರಿ ನಿಮಿತ್ತ ಫೆ.14 ರಿಂದ 16ವರೆಗೆ ವಿಶೇಷ ಕಾರ್ಯಕ್ರಮ
Published on

ರಾಯಚೂರು

ಬ್ರಹ್ಮಕುಮಾರಿಯ ಈಶ್ವರಿ ವಿಶ್ವವಿದ್ಯಾಲಯದಿಂದ ಮಹಾಶಿವರಾತ್ರಿ ನಿಮಿತ್ತ ಫೆ.14 ರಿಂದ 16 ವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಂದು ಸಂಚಾಲಕಿ ರಾಜಯೋಗಿನಿ ಸ್ಮಿತಾ ಅಕ್ಕ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿ, ಫೆ.14 ರಂದು ಸಂಜೆ 4 ಗಂಟೆಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಶಾಂತಿಯಾತ್ರೆ ನಡೆಯಲಿದ್ದು, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ತೀನ್ ಕಂದೀಲ್, ಮಹಾವೀರ ವೃತ್ತ, ಚಂದ್ರಮೌಳೇಶ್ವರ ವೃತ್ತದಿಂದ ವಾಲ್ಕಟ್ ಮೈದಾನಕ್ಕೆ ಆಗಮಿಸಲಿದೆ. ನಂತರ ದ್ವಾದಶ ಜ್ಯೋತಿರ್ಲಿಂಗಗಳ ಪ್ರದರ್ಶನ, ಸಹಸ್ರ ಲಿಂಗಗಳ ದರ್ಶನ, ಚಿತ್ರ ಪ್ರದರ್ಶನ, ಶಿವಾನುಭವ ಮಂಟಪ, ಶಿವನೊಂದಿಗೆ ಸೆಲ್ಪಿ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ನಂತರ ಶಿವರಾತ್ರಿ ಉಪವಾಸ, ಜಾಗರಣೆ ರಹಸ್ಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.

ಫೆ.15 ರಂದು ಬೆಳಿಗ್ಗೆ 8 ಗಂಟೆಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದಲ್ಲಿ ಶಿವ ಧ್ವಜಾರೋಹಣ, ಸಂಜೆ 6 ಗಂಟೆಗೆ ಕಲೆ ಮತ್ತು ಸಂಸ್ಕೃತಿಯಲ್ಲಿ ಆಧ್ಯಾತ್ಮ ತತ್ವ ಕುರಿತು ಉಪನ್ಯಾಸ, ನಂತರ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ನೃತ್ಯ ವೈಭವ ಕಾರ್ಯಕ್ರಮಗಳು ಜರುಗಲಿವೆ. ಫೆ.16 ರಂದು ಸಂಜೆ 6 ಗಂಟೆ ಕಾಯಕವೇ ಕೈಲಾಸ ಕುರಿತು ಉಪನ್ಯಾಸ, ನಂತರ ವಿವಿಧ ವಿಭಾಗಗಳ ಪೊಲೀಸ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಚಿವರು, ಶಾಸಕರು, ಸಂಸದರು, ವಿವಿಧ ಇಲಾಖೆ ಅಧಿಕಾರಿಗಳು, ಎಲ್ಲಾ ಸಮೂದಾಯ ಮುಖಂಡರು ಭಾಗವಹಿಸಲಿದ್ದು ಸಾರ್ವಜನಿಕರು ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಹ ಸಂಚಾಲಕರಾದ ಶಾರದ , ಶರಣಬಸವಪ್ಪ ಅಂಗಡಿ, ರೇಖಾ ಕೇಶವರೆಡ್ಡಿ, ದಾನಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net