ಅಕ್ರಮಗಳಿಗೆ ಕಡಿವಾಣ ಹಾಕಲು ವಿಶೇಷ ಕಾರ್ಯಾಚರಣೆ -ಎಸ್ಪಿ

ಎಸ್ಪಿ ಅರುಣಾಂಗ್ಶು ಗಿರಿ
ಎಸ್ಪಿ ಅರುಣಾಂಗ್ಶು ಗಿರಿ
Published on

ರಾಯಚೂರು ಲಾಖೆಯ ಸಿಬ್ಬಂದಿಗಳಲ್ಲಿ ಶಿಸ್ತು ಹಾಗೂ ಪಾರದರ್ಶಕ ಆಡಳಿತ ನೀಡಲು ಪ್ರತಿ ಠಾಣೆಯಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲಾಗುಲಾಗುತ್ತದೆಂಂದು ಎಸ್ಪಿ ಅರುಣಾಂಗ್ಶು ಗಿರಿ ಹೇಳಿದರು.

ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 10 ದಿನಗಳ ಹಿಂದೆ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಲಾಖೆಯ ಎಲ್ಲಾ ಠಾಣೆಗಳಿಗೆ ಭೇಟಿ ನೀಡಿರುವೆ. ಠಾಣೆಯಲ್ಲಿ ಅಪರಾಧ ಪ್ರಕರಣಗಳು, ಶಿಕ್ಷೆ ಮತ್ತು ರೂಢಿಗತ ಅಪರಾಧಗಳಕುರಿತು ಮಾಹಿತಿ ಪಡೆಯಲಾಗಿದೆ. ಸಿಬ್ಬಂದಿಗಳಿಗೆ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ಠಾಣೆ ವ್ಯಾಪ್ತಿಯ ದಿನ 24 ಗಂಟೆ ಸಿಸಿಟಿವಿಗಳು ನಿರ್ವಹಣೆ, ಸಿಬ್ಬಂದಿಗಳಲ್ಲಿ ಶಿಸ್ತು ರೂಢಢಿಸಿಕಳ್ಳುವ ಕುರಿತು ನಿರ್ದೇಶನ ನೀಡಲಾಗಿದೆ. ನಮಲ್ಲಿ 250 ಸಿಬ್ಬಂದಿಗಳ ಕೊರತೆ ಇರುವುದರಿಂದ ರಾತ್ರಿ ಗಸ್ತು ಹಾಗೂ ಬಂದೋಬಸ್ತ್ ನಿರ್ವಹಣೆಗೆ ಸಮಸ್ಯೆಯಾಗಿದೆ. ಆದರೂ ಪಾಳೆ ಪ್ರಕಾರ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗುತ್ತದೆ. ಒತ್ತಡದಲ್ಲಿ ಸಿಬ್ಬಂದಿಗಳು ಕೆಲಸ ಮಾಡದಂತೆ ನಿಗಾವಹಿಸಲಾಗುತ್ತದೆ ಎಂದರು.

ಎಲ್ಲಾ ಠಾಣೆಗಳಲ್ಲಿ ರೂಢಿಗತ ಅಪರಾಧಿಗಳ ಪಟ್ಟಿಯನ್ನು ಪರಿಷ್ಕರಿಸಿ ಅಪರಾಧಿ ಪ್ರವೃತ್ತಿಯವರ ಮೊಬೈಲ್ ತಪಾಸಣೆ, ಅವರ ಮನಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಯಲ್ಲಿರುವ ಮೊಬೈಲ್ ತಪಾಸಣೆ ನಡೆಸಿ ಅಪರಾಧಿ ಮನೋಭಾವ ಪತ್ತೆ ಮಾಡಲಾಗುತ್ತದೆ. ಸಮಾಜದ ಅಶಾಂತಿಗೆ ಕಾರಣವಾಗುವ ಸಂದೇಶಗಳ ವಿನಿಮಯ ಒಳಗೊಂಡಂತೆ ಚಟುವಟಿಕೆಗಳ ನಿಗಾವಹಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.

ಅಕ್ರಮ ಸಿಎಚ್‌ಪೌಡರ್ ಸಾಗಣೆ, ಮಟ್ಕಾ, ಜೂಜಾಟಗಳ ಸೇರಿದಂತೆ ನಿಗಾವಹಿಸಲು ಕ್ರಮವಹಿಸಲಾಗುತ್ತದೆ. ಸಾರ್ವಜನಿಕರು ಸಹಕಾರ ನೀಡಿ ಮಾಹಿತಿಯನ್ನು ಇಲಾಖೆಗೆ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಶಾಂತವೀರ, ವೆಂಕಟೇಶ ಉಗಿಬಂಡಿ, ಸಿಪಿಐಗಳಾದ ಸಾಬಯ್ಯ ನಾಯಕ,ನಿಂಗಪ್ಪ, ಪಿಎಸ್‌ಐಗಳಾದ ಮಂಜುನಾಥ, ಸಣ್ಣ ವೀರೇಶ, ಮಹ್ಮದ್ ಇಸಾಕ್ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net