ಅರಕೇರಾ ತಾಲೂಕಿನ ಬಿ.ಗಣೇಕಲ್ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಶನಿವಾರ ವಿಶೇಷ ಹೋಮ-ಹವನ ಕಾರ್ಯಕ್ರಮ ಜರುಗಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಿ.ಗಣೇಕಲ್ ಗ್ರಾಮದ ಶ್ರೀ ಮಾರುತೇಶ್ವರ ದೇವಾಲಯದಲ್ಲಿ ಕಾರ್ಯಕ್ರಮ
ತಿರುಪತಿ ಜೋಶಿ ಮುಂಡರಗಿ, ತಿರುಮಲಾಚಾರಿ ರಾಜ ಪುರೋಹಿತರ ನೇತೃತ್ವ
ಅರಕೇರಾ: ಲೋಕಕಲ್ಯಾಣಾರ್ಥ ತಾಲೂಕಿನ ಬಿ.ಗಣೇಕಲ್ ಗ್ರಾಮದ ಶ್ರೀ ಮಾರುತೇಶ್ವರ ದೇವಾಲಯದಲ್ಲಿ ಶನಿವಾರ ವಿಶೇಷ ಹೋಮ-ಹವನ ಕಾರ್ಯಕ್ರಮ ನೆರವೇರಿಸಲಾಯಿತು.
ದೇವರಿಗೆ ಪಂಚಾಮೃತ ಹಾಗೂ ಫಲ ಪಂಚಾಮೃತ ಅಭಿಷೇಕ, ನವಗ್ರಹ ಗಣಪತಿ ಪೂಜೆ, ಪವಮಾನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸಿ ಜನರ ಆರೋಗ್ಯ, ಸಮೃದ್ಧಿಯಾಗಲಿ ಎಂಬ ಆಶಯದಿಂದ ಪಂಡಿತರಾದ ತಿರುಪತಿ ಜೋಶಿ ಮುಂಡರಗಿ ಹಾಗೂ ತಿರುಮಲಾಚಾರಿ ರಾಜ ಪುರೋಹಿತ ಅವರ ನೇತೃತ್ವದಲ್ಲಿ ಮಂತ್ರಪಠಣದ ಮಧ್ಯೆ ಪೂಜೆಗಳು ಜರುಗಿದವು. ನಂತರ ಮಂಗಳಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.