ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿ ಪ್ರಕಟ

 ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಜಿಲ್ಲಾಧಿಕಾರಿ ಎಸ್. ಪೂವಿತಾ ಅಧ್ಯಕ್ಷತೆಯಲ್ಲಿ ಸೋಮವಾರ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಸಭೆ ನಡೆಯಿತು. ಪಾಲಿಕೆ ಅಯಕ್ತ ಜುಬಿನ್ ಮಹೋಪಾತ್ರ, ಎಸಿಗಳಾದ ಡಾ.ಹಂಪಣ್ಣ ಸಜ್ಜನ, ಬಸವಣೆಪ್ಪ್ ಕಲಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ತಿಮ್ಮಪ್ಪ ಬಿರಾದಾರ್, ಸಿಂಧನೂರು ತಹಶೀಲ್ದಾರ್ ಅರುಣ ಕುಮಾರ ದೇಸಾಯಿ, ಚುನಾವಣಾ ಶಾಖೆಯ ಶಿರಸ್ತೇದಾರ ಋಷಿಕೇಶ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಜೂ.20ರಿಂದ ಪ್ರಕ್ರಿಯೆ ಆರಂಭ
ರಾಯಚೂರು ಕೇಂದ್ರ ಚುನಾವಣೆ ಆಯೋಗವು ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಿದ್ದು, ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯುಮರೇಷನ್ ಅರ್ಜಿಗಳನ್ನು ನೀಡಿ ಮಾಹಿತಿಯನ್ನು ಸಂಗ್ರಹಿಸಿ ಬಿಎಲ್ ಒ ಆ್ಯಪ್‌ನಲ್ಲಿ ದಾಖಲಿಸಲಾಗುತ್ತದೆಂದು ಜಿಲ್ಲಾಧಿಕಾರಿ ಎಸ್.ಪೂವಿತಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಸೋಮವಾರ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಮೂರನೇ ಹಂತದಲ್ಲಿ ಜರುಗಲಿದೆ. ಜಿಲ್ಲೆಯಲ್ಲಿ ಜೂ.20 ರಿಂದ ಪ್ರಕ್ರಿಯೆಯು ಆರಂಭವಾಗಿ ಅಕ್ಟೋಬರ 7ಕ್ಕೆ ಮುಕ್ತಾಯವಾಗಲಿದೆ. ಜೂನ್ 20 ರಿಂದ 29ರವರೆಗೆ ಈ ಪ್ರಕ್ರಿಯೆಯ ಸಿದ್ಧತೆ, ಪ್ರಕ್ರಿಯೆಯ ಭಾಗವಾಗಿರುವ ಎಲ್ಲಾ ಹಂತದ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ತರಬೇತಿ, ಅವಶ್ಯವಿರುವ ದಾಖಲೆಗಳ ಮುದ್ರಣ ಕಾರ್ಯ ಜರುಗಲಿದೆ.
ತದನಂತರ ಜೂ. 30 ರಿಂದ ಜುಲೈ 29 ರವರೆಗೆ ಜಿಲ್ಲೆಯ 07 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 1853 ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯುಮರೇಷನ್ ಅರ್ಜಿಗಳನ್ನು ನೀಡಿ ಮಾಹಿತಿಯನ್ನು ಸಂಗ್ರಹಿಸಿ ಬಿಎಲ್ಒ ಆ್ಯಪ್‌ನಲ್ಲಿ ದಾಖಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಅಯಕ್ತ ಜುಬಿನ್ ಮಹೋಪಾತ್ರ, ಎಸಿಗಳಾದ ಡಾ.ಹಂಪಣ್ಣ ಸಜ್ಜನ, ಬಸವಣೆಪ್ಪ್ ಕಲಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ತಿಮ್ಮಪ್ಪ ಬಿರಾದಾರ್, ಸಿಂಧನೂರು ತಹಶೀಲ್ದಾರ್ ಅರುಣ ಕುಮಾರ ದೇಸಾಯಿ, ಚುನಾವಣಾ ಶಾಖೆಯ ಶಿರಸ್ತೇದಾರ ಋಷಿಕೇಶ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net