ಗಬ್ಬೂರು ಶ್ರೀಮಠದಿಂದ ಸಾಮಾಜಿಕ ಕಾರ್ಯ

ದೇವದುರ್ಗ ತಾಲೂಕು ಗಬ್ಬೂರಿನ ಶ್ರೀ ಬೂದಿಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕಗೆ ಬೂದಿಬಸವ ಶಿವಾಚಾರ್ಯರು ಸನ್ಮಾನಿಸಿದರು.
ದೇವದುರ್ಗ ತಾಲೂಕು ಗಬ್ಬೂರಿನ ಶ್ರೀ ಬೂದಿಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕಗೆ ಬೂದಿಬಸವ ಶಿವಾಚಾರ್ಯರು ಸನ್ಮಾನಿಸಿದರು.
Published on
ದೇವದುರ್ಗ: ಜಿಲ್ಲೆಯ ಐತಿಹಾಸಿಕ ಗಬ್ಬೂರು ಶ್ರೀ ಬೂದಿಬಸವೇಶ್ವರ ದೇವಸ್ಥಾನ ಹಾಗೂ ಶ್ರೀಮಠ ಸಾಮೂಹಿಕ ವಿವಾಹ, ಪ್ರವಚನ ಸೇರಿದಂತೆ ಹಲವು ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಸಚಿವ ಎನ್.ಎಸ್.ಬೋಸರಾಜು ಹೇಳಿದರು. 
ಶ್ರೀ ಬೂದಿಬಸವೇಶ್ವರ ಜಾತ್ರೆ ನಿಮಿತ್ತ ಶ್ರೀಮಠಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 
ಜಾತ್ರೆ ನಿಮಿತ್ತ ಸಾಮೂಹಿಕ ವಿವಾಹ, ಧಾರ್ಮಿಕ ಬೋಧನೆ, ಬಡಮಕ್ಕಳಿಗೆ ಶಿಕ್ಷಣ, ವಸತಿ ಸೌಲಭ್ಯ ಕಲ್ಪಿಸಿ ಬಡವರ ಮನೆ ಬೆಳಗುತ್ತಿದೆ. ಈ ವರ್ಷ ಜಾತ್ರೆ ನಿಮಿತ್ತ 150ಕ್ಕೂ ಹೆಚ್ಚು ಜೋಡಿಗಳ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಇಂಥ ಕಾರ್ಯಕ್ರಮ ಬಡವರಿಗೆ ತುಂಬ ಅನುಕೂಲವಾಗಿದ್ದು ಸಾಲದ ಭಾರ ಕಡಿಮೆ ಮಾಡುವ ಜತೆಗೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲಿದೆ ಎಂದರು.
ಇದೇ ಸಂದರ್ಭದಲ್ಲಿ ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು ಸಚಿವ ಬೋಸರಾಜು, ಮಾನ್ವಿ ಶಾಸಕ ಹಂಪಯ್ಯ ನಾಯಕಗೆ ಸನ್ಮಾನಿಸಿ ಆಶೀರ್ವದಿಸಿದರು. ಕೆಪಿಸಿಸಿ ಕಾರ್ಯದರ್ಶಿ ರಾಮಣ್ಣ ಕೆ.ಇರಬಗೇರಾ, ಪ್ರಮುಖರಾದ ಶರಣಗೌಡ, ಬಸನಗೌಡ, ಹನುಮಂತ, ಸಿದ್ದಯ್ಯ ತಾತ, ಪಂಪಾಪತಿ, ತಿಮ್ಮಪ್ಪ, ಸುರೇಶ ನಾಯಕ, ವೆಂಕನಗೌಡ, ಚನ್ನಬಸವ ಇತರರಿದ್ದರು.
ಜಾತ್ರೆಗೆ ಸಿದ್ಧತೆ: ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು ಕೆಲದಿನಗಳ ಹಿಂದೆ ಹೊರ ತಂದ ತೇರಿಗೆ ಹೊಸ ಗಾಲಿ ಜೋಡಿಸಲಾಗುತ್ತಿದೆ. ವೇದಿಕೆ ಕಾರ್ಯಕ್ರಮ, ದಾಸೋಹ ಮೈದಾನ ಸಿದ್ಧಪಡಿಸಲಾಗಿದೆ. ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರ ನೇತೃತ್ವದಲ್ಲಿ ವಿವಿಧ ಕಾರ್ಯಗಳು ನಡೆಯುತ್ತಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net